ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ - ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 349ನೇ ಆರಾಧನಾ ಮಹೋತ್ಸವ

ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಮಹಾಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ನಿಮಿತ್ತ ಸರಳವಾಗಿ ರಥೋತ್ಸವ ಆಚರಿಸಲಾಯಿತು.

ಆರಾಧನಾ ಮಹೋತ್ಸವ
ಆರಾಧನಾ ಮಹೋತ್ಸವ

By

Published : Aug 7, 2020, 10:26 AM IST

ಮುದ್ದೇಬಿಹಾಳ: ಪಟ್ಟಣದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 349ನೇ ಆರಾಧನಾ ಮಹೋತ್ಸವವನ್ನು ನಿನ್ನೆ ಸರಳವಾಗಿ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ವಿಷ್ಣು ಸಹಸ್ರನಾಮ ಮತ್ತು ಅಷ್ಟೋತ್ತರ ಪಂಚಾಮೃತ, ಮಹಾಭಿಷೇಕ ಪುಷ್ಪಾಲಂಕಾರ, ಮಹಾ ನೈವೇದ್ಯ, ಮಂಗಳಾರತಿ ಕಾರ್ಯಕ್ರಮ ಜರುಗಿದವು. ಸಂಜೆ ರಥೋತ್ಸವ ಮತ್ತು ಕಿಲ್ಲಾದಲ್ಲಿರುವ ವಿಠ್ಠಲ ಮಂದಿರದಲ್ಲಿ ಆರಾಧನಾ ಮಹೋತ್ಸವ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀನಿವಾಸಾಚಾರ್ಯ ಗಜೇಂದ್ರಗಡ, ಗುರುರಾಜ ಪುರೋಹಿತ, ಪ್ರವೀಣಾಚಾರ್ಯ, ತರುಣ ಸಂಘದವರಾದ ಪುಟ್ಟು ಕುಲಕರ್ಣಿ, ರಾಜು ಪದಕಿ, ಸುರೇಶ ಕುಲಕರ್ಣಿ, ಸುಭಾಷ ಕುಲಕರ್ಣಿ, ಅರವಿಂದ ಕುಲಕರ್ಣಿ, ಅರುಣಕುಮಾರ ಪದಕಿ, ಅನಿಲ ಕುಲಕರ್ಣಿ, ಬಾಳು ಗಿಂಡಿ, ರವಿ ಕುಲಕರ್ಣಿ, ಸಂಕರ್ಷಣ ಗಿಂಡಿ ಉಪಸ್ಥಿತರಿದ್ದರು.

For All Latest Updates

ABOUT THE AUTHOR

...view details