ಕರ್ನಾಟಕ

karnataka

ETV Bharat / state

ದೆಹಲಿ ಕಾರ್ಯಕ್ರಮದಲ್ಲಿ ರಾಜ್ಯದ 342 ಜನ ಭಾಗಿ: 200 ಜನರು ಪತ್ತೆ ಹಚ್ಚಿದ ಸರ್ಕಾರ - vijayapura latest news

ರಾಜ್ಯದಲ್ಲಿ ಈವರೆಗೆ 3,443 ಜನರ ಸ್ಯಾಂಪಲ್​ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳಲ್ಲಿ 3,025 ಪರೀಕ್ಷಾ ವರದಿ ಬಂದಿದೆ. ಇನ್ನೂ 133 ಜನರ ವರದಿ ಬರಬೇಕಾಗಿದೆ. ಅವುಗಳಲ್ಲಿ 105 ವರದಿ ಪಾಸಿಟಿವ್ ಬಂದಿದೆ. 226 ಜನರನ್ನು ಐಸೋಲೇಷನ್ ಮಾಡಲಾಗಿದೆ ಎಂದು ಮಾಹಿತಿ ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಹೇಳಿದರು.

ದೆಹಲಿ ಕಾರ್ಯಕ್ರಮದಲ್ಲಿ ರಾಜ್ಯದ 342 ಜನ ಭಾಗಿ
ದೆಹಲಿ ಕಾರ್ಯಕ್ರಮದಲ್ಲಿ ರಾಜ್ಯದ 342 ಜನ ಭಾಗಿ

By

Published : Apr 1, 2020, 10:44 PM IST

ವಿಜಯಪುರ: ದೆಹಲಿಯ ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ 342 ಜನ ಪಾಲ್ಗೊಂಡಿದ್ದರು. ಅವರಲ್ಲಿ ಈಗಾಗಲೇ 200 ಜನರನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಜನರಲ್ಲಿ 13 ಜನರಲ್ಲಿ ಕೊರೊನಾ ನೆಗಟಿವ್ ಬಂದಿದೆ. ಇಂಡೋನೇಷ್ಯಾ, ಮಲೇಶಿಯಾ ಪ್ರವಾಸದಿಂದ 62 ಜನ ರಾಜ್ಯಕ್ಕೆ ಬಂದಿದ್ದಾರೆ. ಅವರಲ್ಲಿ 13 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಈವರೆಗೆ 3,443 ಜನರ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಅವುಗಳಲ್ಲಿ 3,025 ಪರೀಕ್ಷಾ ವರದಿ ಬಂದಿದೆ. ಇನ್ನೂ 133 ಜನರ ವರದಿ ಬರಬೇಕಾಗಿದೆ. ಅವುಗಳಲ್ಲಿ 105 ವರದಿ ಪಾಸಿಟಿವ್ ಬಂದಿದೆ. 226 ಜನರನ್ನು ಐಸೋಲೇಷನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ದೆಹಲಿಯಿಂದ ಬಂದವರು ಎಲ್ಲಲ್ಲಿ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ದೆಹಲಿಯಿಂದ ಬೇರೆ ಬೇರೆ ಜಿಲ್ಲೆಗೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಜ್ಯದಲ್ಲಿ ವೆಂಟಿಲೇಟರ್ ಬೇಡಿಕೆ ಇದ್ದು, ಅದನ್ನು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಲ್ಯಾಬ್ ಬೇಡಿಕೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಅಳವಡಿಸುವ ಕುರಿತು ಸಿಎಂ ಜತೆ ಚರ್ಚೆ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಸದ್ಯ 200 ವೈದ್ಯರ ಕೊರತೆ ಇದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ವೈದ್ಯರ ಕೊರತೆ ನೀಗಿಸಲಾಗುವುದು. ರಾಜ್ಯದಲ್ಲಿ ಒಟ್ಡು 7 ಲ್ಯಾಬ್​​ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿ ಲ್ಯಾಬ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details