ಕರ್ನಾಟಕ

karnataka

ETV Bharat / state

ರಾಜ್ಯ ಅಭಿವೃದ್ಧಿಗೆ ಈ ವರ್ಷ 30,445 ಕೋಟಿ ರೂ. ಬಿಡುಗಡೆ ಮಾಡಲಾಗಿದೆ: ಡಿಸಿಎಂ ಕಾರಜೋಳ - ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪರಿಷತ್ತಿನ ಸಭೆ ಮಾಡಿ, 30,445 ಕೋಟಿ ಹಣ ಈ ವರ್ಷ ಬಿಡುಗಡೆ ಮಾಡಿದ್ದು, ಅದನ್ನು ಬಳಸಿ ಪ್ರಗತಿ ಸಾಧಿಸುತೇವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಡಿಸಿಎಂ ಕಾರಜೋಳ
ಡಿಸಿಎಂ ಕಾರಜೋಳ

By

Published : Jan 27, 2020, 5:36 PM IST

ವಿಜಯಪುರ: ಕಳೆದ ಸೆ.16ನೇ ತಾರೀಖು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಪರಿಷತ್ತಿನ ಸಭೆ ಮಾಡಿ, 30,445 ಕೋಟಿ ಹಣ ಈ ವರ್ಷ ರಾಜ್ಯದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದರು. ಅನುದಾನವನ್ನು ವರ್ಷದ ಅಂತ್ಯದೊಳಗೆ ಸಂಪೂರ್ಣ ಬಳಕೆ ಮಾಡಿಕೊಂಡು ಭೌತಿಕ ಪ್ರಗತಿ ಸಾಧಿಸುತೇವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಭಾಭವನದಲ್ಲಿ ಸಭೆ ನಡೆಸಿ ಮಾತನಾಡಿದ ಡಿಸಿಎಂ

ನಗರ ಜಿಲ್ಲಾಧಿಕಾರಿ ಸಭಾಭವನದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪ.ಪಂಗಡ ಜನಾಂಗಕ್ಕೆ ಗಂಗಾ ಕಲ್ಯಾಣ ಯೋಜನೆಯಲ್ಲಿ 28 ಸಾವಿರ ಕೊಳವೆ ಬಾವಿಗಳನ್ನು ಕೊರೆಸಲು ಈಗಾಗಲೇ ಮಂಜೂರಾತಿ ಕೊಟ್ಟು ಕೆಲಸ ಪ್ರಾರಂಭಿಸಿದ್ದೇವೆ. ಎಸ್​ಸಿ, ಎಸ್​ಟಿ ಜನಾಂಗದ 824 ವಸತಿ ಶಾಲೆಗಳಲ್ಲಿ 1 ಲಕ್ಷ 61 ಸಾವಿರ ಮಕ್ಕಳು ಓದುತ್ತಿದ್ದಾರೆ‌. ಇನ್ನೂ 2,696 ವಸತಿ ನಿಲಯಗಳಲ್ಲಿ ಸುಮಾರು 2 ಲಕ್ಷ ಮಕ್ಕಳು ಓದುತ್ತಿದ್ದಾರೆ. ಅಲ್ಲದೇ 43.70 ಅಂದ್ರೆ 44 ಲಕ್ಷ ಮಕ್ಕಳಿಗೆ ಶಿಷ್ಯ ವೇತನ ನೀಡುತ್ತಿದ್ದೇವೆ ಎಂದು ಹೇಳಿದರು.

ABOUT THE AUTHOR

...view details