ಕರ್ನಾಟಕ

karnataka

ETV Bharat / state

8 ಕೆಜಿ ಗಾಂಜಾ ಸಮೇತ ಮೂವರ ಬಂಧನ

ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ 8 ಕೆಜಿ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಗಾಂಜಾ ಸಮೇತ ಆರೋಪಿಗಳ ಬಂಧನ
ಗಾಂಜಾ ಸಮೇತ ಆರೋಪಿಗಳ ಬಂಧನ

By

Published : Mar 13, 2021, 10:24 AM IST

ವಿಜಯಪುರ: ಅಕ್ರಮವಾಗಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಾಂಜಾ ಸಮೇತ ಆರೋಪಿಗಳ ಬಂಧನ

ದೊಂಡಿಬಾ ಜರಕ, ಆಕಾಶ ಬೋರಕರ, ಯಲ್ಲಪ್ಪ ಕರೆಪ್ಪನವರ ಬಂಧಿತರು. ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ಬಳಿಯ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದರು. ಬಂಧಿತರಿಂದ 8 ಕೆಜಿ ಗಾಂಜಾ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಸಿಪಿಐ ಸಂಗಮೇಶ ಪಾಲಬಾವಿ, ಪಿಎಸ್ಐ ಆನಂದ ಠಕ್ಕಣ್ಣನವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details