ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಗ್ರಾ.ಪಂ ಚುನಾವಣೆ ಶಾಂತಿಯುತ

ಸಿಂದಗಿ ತಾಲೂಕಿನ ನಾಗಾವಿ ಬಿ.ಕೆ. ಗ್ರಾಮ ಹಾಗೂ ದೇವರ ಹಿಪ್ಪರಗಿ ತಾಲೂಕಿನ ಮಣೂರ ಗ್ರಾ.ಪಂ ಮತಗಟ್ಟೆಯಲ್ಲಿ ತಲಾ ಒಬ್ಬರು ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದರು.

2nd poll of Gram panchayat Election in Vijayapura District
ವಿಜಯಪುರದಲ್ಲಿ ಎರಡನೇ ಹಂತದ ಗ್ರಾ.ಪಂ ಚುನಾವಣೆ

By

Published : Dec 27, 2020, 10:02 PM IST

ವಿಜಯಪುರ: ಜಿಲ್ಲೆಯ 4 ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಶಾಂತಿಯುತವಾಗಿ ಮತದಾನ ನಡೆದಿದೆ. ಕೆಲವು ಸ್ವಾರಸ್ಯಕರ ಘಟನೆ, ಕೆಲ ಗೊಂದಲ, ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಒಟ್ಟು ಭೀಮಾತೀರದ ನಾಲ್ಕು ತಾಲೂಕಿನಲ್ಲಿ ಮತದಾನ ನಡೆದಿದ್ದು, ಒಟ್ಟಾರೆ ಶೇ.69.75 ರಷ್ಟು ಮತದಾನವಾಗಿದೆ.

ವಿಜಯಪುರದಲ್ಲಿ ಎರಡನೇ ಹಂತದ ಗ್ರಾ.ಪಂ ಚುನಾವಣೆ: ಶಾಂತಿಯುತ ಮತದಾನ

ಇಂಡಿ ತಾಲೂಕಿನಲ್ಲಿ ಬೆಳಗ್ಗೆ 7-9 ಗಂಟೆಯ ವರೆಗೆ ಶೇ. 14.50, 11 ರವರೆಗೆ ಶೇ. 23.14, 1 ಗಂಟೆಯವರೆಗೆ ಶೇ. 38.65, ಮಧ್ಯಾಹ್ನ 3 ಗಂಟೆಯವರೆಗೆ ಶೇ. 62.48 ಹಾಗೂ ಸಂಜೆ ಮತದಾನದ‌ ಅಂತ್ಯಕ್ಕೆ ಶೇ. 72.91 ಮತದಾನವಾಗಿದೆ.

ಚಡಚಣ ತಾಲೂಕಿನಲ್ಲಿ ಬೆಳಗ್ಗೆ 7-9 ಗಂಟೆಯವರೆಗೆ ಶೇ.13.65, 11 ರವರೆಗೆ ಶೇ.18.65, 1 ಗಂಟೆಯವರೆಗೆ ಶೇ. 29.50, ಮಧ್ಯಾಹ್ನ 3 ಗಂಟೆಯವರೆಗೆ ಶೇ. 55.24 ಹಾಗೂ ಸಂಜೆ ಮತದಾನದ‌ ಅಂತ್ಯಕ್ಕೆ ಶೇ. 67.91ರಷ್ಟು ಮತದಾನವಾಗಿದೆ.

ಸಿಂದಗಿ ತಾಲೂಕಿನಲ್ಲಿ ಬೆಳಗ್ಗೆ 7-9 ಗಂಟೆ ಯವರೆಗೆ ಶೇ. 16.75, 11 ರವರೆಗೆ ಶೇ. 21.70, 1 ಗಂಟೆಯವರೆಗೆ ಶೇ. 33.85, ಮಧ್ಯಾಹ್ನ 3 ಗಂಟೆ ಯವರೆಗೆ ಶೇ. 56.13 ಹಾಗೂ ಸಂಜೆ ಮತದಾನದ‌ ಅಂತ್ಯಕ್ಕೆ ಶೇ. 68.11ರಷ್ಟು ಮತದಾನವಾಗಿದೆ.

ದೇವರ ಹಿಪ್ಪರಗಿ ತಾಲೂಕಿನಲ್ಲಿ ಬೆಳಗ್ಗೆ 7-9 ಗಂಟೆಯವರೆಗೆ ಶೇ.13.00, 11 ರವರೆಗೆ ಶೇ. 21.25, 1 ಗಂಟೆ ಯವರೆಗೆ ಶೇ. 36.12, ಮಧ್ಯಾಹ್ನ 3 ಗಂಟೆಯ ವರೆಗೆ ಶೇ. 59.45 ಹಾಗೂ ಸಂಜೆ ಮತದಾನದ‌ ಅಂತ್ಯಕ್ಕೆ ಶೇ. 70.08 ರಷ್ಟು ಮತದಾನ ನಡೆದಿದೆ. ಒಟ್ಟು ನಾಲ್ಕು ತಾಲೂಕು ಸೇರಿ ಶೇ. 69.75ರಷ್ಟು ಮತದಾನವಾಗಿದೆ.

ಸೋಂಕಿತರಿಂದ ಮತದಾನ: ಸಿಂದಗಿ ತಾಲೂಕಿನ ನಾಗಾವಿ ಬಿ.ಕೆ. ಗ್ರಾಮ ಹಾಗೂ ದೇವರ ಹಿಪ್ಪರಗಿ ತಾಲೂಕಿನ ಮಣೂರ ಗ್ರಾ.ಪಂ ಮತಗಟ್ಟೆಯಲ್ಲಿ ತಲಾ ಒಬ್ಬರು ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದರು.

ವಾಗ್ವಾದ: ಇಂಡಿ ತಾಲೂಕಿನ ಭತಗುಣಕಿಯ ವಾರ್ಡ್ ನಂ 5 ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದಿದ್ದ ಮತದಾರನಿಗೆ ಏಕವಚನದಲ್ಲಿ ಅಧಿಕಾರಿ ನಿಂದಿಸಿದ್ದಕ್ಕೆ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಮತದಾರ ಹಾಗೂ ಅಧಿಕಾರಿ ಮಧ್ಯೆ ವಾಗ್ವಾದ ಸಹ ನಡೆಯಿತು.‌

88 ಗ್ರಾಪಂಗೆ ಪೈಪೋಟಿ:ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ನಾಲ್ಕು ತಾಲೂಕಿನ 88 ಗ್ರಾಪಂಗಳ 1628 ಸ್ಥಾನಗಳಿಗೆ 4250 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರ ಬರೆದಿದ್ದಾನೆ.

ABOUT THE AUTHOR

...view details