ಕರ್ನಾಟಕ

karnataka

ETV Bharat / state

ರೈತರಿಗೆ 24 ಗಂಟೆ ವಿದ್ಯುತ್.. ಎರಡೂವರೆ ವರ್ಷದಲ್ಲಿ ವಿದ್ಯುತ್ ಸಮಸ್ಯೆಗೆ ಪೂರ್ಣ ಪರಿಹಾರ - ಮುದ್ದೇಬಿಹಾಳ ಮತಕ್ಷೇತ್ರ

ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ ಕೆ ಗೋಟ್ಯಾಳ ಮಾತನಾಡಿ, ತಾಲೂಕಿಗೆ 1993-95ರಲ್ಲಿ ಮುದ್ದೇಬಿಹಾಳ 110 ಕೆವಿ ಸಾಮರ್ಥ್ಯದ ಒಂದೇ ಸ್ಟೇಶನ್ ಇದ್ದು, ನಾಲತವಾಡ, ಢವಳಗಿ, ತಾಳಿಕೋಟಿ 33 ಕೆವಿ ಸ್ಟೇಷನ್ ಇದ್ದವು..

24 hour electricity for farmers
ರೈತರಿಗೆ 24 ಗಂಟೆ ವಿದ್ಯುತ್

By

Published : Sep 19, 2020, 10:52 PM IST

Updated : Sep 20, 2020, 7:40 AM IST

ಮುದ್ದೇಬಿಹಾಳ : ಮತಕ್ಷೇತ್ರದ ವಿದ್ಯುತ್ ಸಮಸ್ಯೆಗೆ ಇನ್ನು ಎರಡೂವರೆ ವರ್ಷಗಳಲ್ಲಿ ಶಾಶ್ವತ ಪರಿಹಾರ ದೊರೆಯಲಿದ್ದು ನಿರಂತರ ಕುಡಿವ ನೀರು ಜನತೆಗೆ ಲಭ್ಯವಾಗಲಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ,ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ತಾಲೂಕಿನ ಹಿರೇಮುರಾಳ ಗ್ರಾಮದ ನೆರಬೆಂಚಿ ರಸ್ತೆಯಲ್ಲಿ ಕೆಪಿಟಿಸಿಎಲ್ ಅಡಿ 110 ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯುತ್ ಉಪಕೇಂದ್ರ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ

126 ಹಳ್ಳಿಗಳ ಪ್ರತಿ ಮನೆ ಮನೆಗೂ ಮಿನರಲ್ ವಾಟರ್ ಪೂರೈಕೆ ಮಾಡಲು ಜಲಧಾರೆ ಯೋಜನೆಯಡಿ 700 ಕೋಟಿ ರೂ.ಮಂಜೂರಾತಿಗೆ ಪ್ರಸ್ತಾವನೆ ಕಳಿಸಲಾಗಿದೆ. ಜನತೆಗೆ ಶುದ್ಧ ನೀರು ತಮ್ಮ ತಮ್ಮ ಮನೆಗಳಿಗೆ ನಲ್ಲಿಗಳ ಮೂಲಕ ಪೂರೈಕೆಯಾಗಲಿದೆ ಎಂದು ಹೇಳಿದರು.

ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ ಕೆ ಗೋಟ್ಯಾಳ ಮಾತನಾಡಿ, ತಾಲೂಕಿಗೆ 1993-95ರಲ್ಲಿ ಮುದ್ದೇಬಿಹಾಳ 110 ಕೆವಿ ಸಾಮರ್ಥ್ಯದ ಒಂದೇ ಸ್ಟೇಶನ್ ಇದ್ದು, ನಾಲತವಾಡ, ಢವಳಗಿ, ತಾಳಿಕೋಟಿ 33 ಕೆವಿ ಸ್ಟೇಷನ್ ಇದ್ದವು.

ತಾಳಿಕೋಟಿ ಸ್ಟೇಷನ್ 33 ಕೆವಿ ಇದ್ದದ್ದು 110 ಸ್ಟೇಷನ್‌ಗೆ ಕಳೆದ ವರ್ಷ ಅಪ್​ಗ್ರೇಡ್ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ನೀರಾವರಿ ಪಂಪ್​​ಸೆಟ್‌ಗಳಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲು ಶಾಸಕರಾದ ನಡಹಳ್ಳಿ ಅವರು ತಮ್ಮೊಂದಿಗೆ ಚರ್ಚೆ ನಡೆಸಿ ನಾಲ್ಕು ಹೊಸ ಸ್ಟೇಷನ್‌ಗಳಿಗೆ ಮಂಜೂರಾತಿ ಪಡೆದುಕೊಂಡು ಬಂದಿದ್ದಾರೆ.

ಒಂದೇ ಒಂದು 110 ಕೆವಿ ಸ್ಟೇಷನ್ ಇದ್ದ ಸಂಖ್ಯೆ ಇದೀಗ ಆರು 110 ಸ್ಟೇಷನ್‌ಗಳು ಮುದ್ದೇಬಿಹಾಳ ಕ್ಷೇತ್ರದಲ್ಲಿ ಆಗಲಿವೆ ಎಂದು ಹೇಳಿದರು. ಬಿಜೆಪಿ ಮುಖಂಡ ಎಂ ಎಸ್ ಪಾಟೀಲ ಮಾತನಾಡಿದರು. ಶಿವಶಂಕರಗೌಡ ಹಿರೇಗೌಡರ, ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ತಾಪಂ ಸದಸ್ಯ ಶಿವನಗೌಡ ಮುದ್ದೇಬಿಹಾಳ, ಕೆಪಿಟಿಸಿಎಲ್ ಸಿಇ ಬಿ ಎಸ್ ಹೆಬ್ಬಾಳ,ಜಿ.ಶರಣಪ್ಪ, ಜಗದೀಶ ಜಾಧವ್, ಪಿ ಜೆ ಹಜೇರಿ, ಎಂ ಪಿ ಜೋಶಿ, ಆರ್ ಎನ್ ಹಾದಿಮನಿ ಮೊದಲಾದವರಿದ್ದರು.

Last Updated : Sep 20, 2020, 7:40 AM IST

ABOUT THE AUTHOR

...view details