ಕರ್ನಾಟಕ

karnataka

ETV Bharat / state

ಬ್ಲ್ಯಾಕ್ ಅಂಡ್​​ ವೈಟ್ ಮನಿ ಹೆಸರಿನಲ್ಲಿ ರೈತನಿಗೆ ₹20 ಲಕ್ಷ ವಂಚನೆ: ಆರೋಪಿಗಳ ಬಂಧನ - ಈಟಿವಿ ಭಾರತ್​ ಕನ್ನಡ ನ್ಯೂಸ್

ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿಕೊಟ್ಟರೆ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ​ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದೆ.

ಬ್ಲ್ಯಾಕ್ ಆ್ಯಂಡ್​ ವೈಟ್ ಮನಿ ವಂಚನೆ
ಬ್ಲ್ಯಾಕ್ ಅಂಡ್​​ ವೈಟ್ ಮನಿ ವಂಚನೆ

By ETV Bharat Karnataka Team

Published : Sep 6, 2023, 3:47 PM IST

ಬ್ಲ್ಯಾಕ್ ಅಂಡ್ ವೈಟ್ ಮನಿ ಪ್ರಕರಣ- ಎಸ್​​​ ಪಿ ಹೇಳಿಕೆ

ವಿಜಯಪುರ :ಬ್ಲ್ಯಾಕ್ ಅಂಡ್​​ ವೈಟ್ ಮನಿ ಹೆಸರಿನಲ್ಲಿ ರೈತನೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಕಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಳಗಾವಿ ಜಿಲ್ಲೆಯ ಸಂಗಣ್ಣಕೇರಿ ಗ್ರಾಮದ ಲಕ್ಷ್ಮಿ ರಾಮಪ್ಪ ಕಂಕನವಾಡಿ, ಹಳದೂರು ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ, ಹಲಗಾ ಗ್ರಾಮದ ಅಪ್ಪಾಸಾಹೇಬ ಚಿಂಚಲ್ ಹಾಗೂ ಚಿಕ್ಕೋಡಿಯ ಸುನೀಲ್​ ದೊಡ್ಡಮನಿ ಎಂದು ಗುರುತಿಸಲಾಗಿದೆ.

ನಡೆದಿದ್ದೇನು? : ಬಂಧಿತ ಆರೋಪಿಗಳು ಬಬಲೇಶ್ವರದ ರೈತ ಚಂದ್ರಶೇಖರ ಕನ್ನೂರ ಎಂಬುವರಿಗೆ 20ಲಕ್ಷ ರೂ. ವಂಚಿಸಿದ್ದಾರೆ. ರೈತ ಚಂದ್ರಶೇಖರನ ಸ್ನೇಹ ಸಂಪಾದಿಸಿದ ಖದೀಮರು ತಮ್ಮ ಬಳಿ ಸಾಕಷ್ಟು ಬ್ಲ್ಯಾಕ್ ಮನಿ ಇದ್ದು, ಅದನ್ನು ವೈಟ್ ಮಾಡಿಕೊಟ್ಟರೆ ಮೂರು ಪಟ್ಟು ಹಣ ನೀಡುತ್ತೇವೆ ಎಂದು ಗಾಳ ಹಾಕಿದ್ದಾರೆ.‌ ಹಣದ ಆಸೆಗೆ ಚಂದ್ರಶೇಖರ ಸಹ ಒಪ್ಪಿದ್ದಾನೆ. ಮೊದಲು 5000 ಹಣ ಚಲಾಯಿಸಿ ನಂಬಿಕೆ ಹುಟ್ಟಿಸಿದ್ದಾರೆ. ನಂತರ ಅತಾಲಟ್ಟಿ ಗ್ರಾಮದ ಬಳಿ ಭೇಟಿಯಾಗಿ 20 ಲಕ್ಷ ರೂ ನಗದು ಪಡೆದಿದ್ದಾರೆ. ಆತನ ಕೈಗೆ ಒಂದು ಬಾಕ್ಸ್​ ನೀಡಿ 1ಕೋಟಿ ರೂ. ಇದೆ ಎಂದು ನಂಬಿಸಿ ಅಲ್ಲಿಂದ ಕಾಲ್ಕತ್ತಿದ್ದಾರೆ.

ನಂತರ ಚಂದ್ರಶೇಖರ ಬಾಕ್ಸ್​ ತೆಗೆದು ನೋಡಿದಾಗ ಅದರಲ್ಲಿ ರಟ್ಟು ತುಂಬಿದ್ದು ಗೊತ್ತಾಗಿದೆ. ಆಗ ತಾನು ಮೋಸ ಹೋಗಿರುವುದಾಗಿ ತಿಳಿದು, ತಕ್ಷಣ ಬಬಲೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಎಸ್ಪಿ ಆನಂದಕುಮಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಅವರಿಂದ 19 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ವಿಜಯಪುರ ಎಸ್ಪಿ ಪ್ರತಿಕ್ರಿಯೆ ಏನು? : ಇನ್ನು ಈ ಪ್ರಕರಣ ಕುರಿತು ಮಾತನಾಡಿದ ವಿಜಯಪುರ ಎಸ್ಪಿ ಹೆಚ್​.ಡಿ ಆನಂದಕುಮಾರ್ ಅವರು,

’’ಇತ್ತೀಚೆಗೆ ವಿವಿಧ ರೀತಿ ವಂಚನೆ ಪ್ರಕರಣಗಳನ್ನು ನೋಡುತ್ತ ಬಂದಿದ್ದೇವೆ. ಅದಕ್ಕೆ ಸಂಬಂಧಿಸಿದಂತೆ ಹಲವು ವ್ಯಕ್ತಿ ಇದನ್ನು ಮೈಗೂಡಿಸಿಕೊಂಡು ಅಮಾಯಕರನ್ನು ಮೋಸ ಮಾಡುತ್ತಿದ್ದಾರೆ. ಇದೇ ರೀತಿ ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿಕೊಟ್ಟರೆ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಗ್ಯಾಂಗ್​​ವೊಂದನ್ನು ಟ್ರ್ಯಾಕ್​ ಮಾಡಿದ್ದೇವೆ. ಆರೋಪಿಗಳಲ್ಲಿ ಮೊದಲು ಮಹಿಳೆಯೊಬ್ಬರು ರೈತನಿಗೆ ಕರೆ ಮಾಡಿ ನಮ್ಮ ಬಳಿ ಬ್ಲ್ಯಾಕ್​ ಮನಿ ಸಾಕಷ್ಟಿದೆ. ನೀವು ನಮಗೆ 5 ಲಕ್ಷ ರೂ. ಕೊಟ್ಟರೇ ನಾವು ನಿಮಗೆ 20 ಲಕ್ಷ ರೂ. ಗಳನ್ನು ಹಿಂತಿರುಗಿಸಿ ಕೊಡುತ್ತೇವೆ ಎನ್ನುವ ಆಮಿಷವೊಡ್ಡಿದ್ದಾರೆ. ತದನಂತರ ಹಣವನ್ನು ತೆಗೆದುಕೊಂಡು ಯಾವುದಾರೂ ಒಂದು ಸ್ಥಳಕ್ಕೆ ಬನ್ನಿ ಎಂದು ರೈತನಿಗೆ ಹೇಳಿದ್ದಾರೆ. ಅಲ್ಲಿಗೆ ಬಂದ ಮೇಲೆ ಹಣವನ್ನು ತುಂಬಿರುವ ಬಾಕ್ಸ್​ವೊಂದನ್ನು ಕೊಡುತ್ತಾರೆ. ಆದರೇ, ಬಾಕ್ಸ್​ ಓಪನ್​ ಮಾಡಲು ಬಿಡುವುದಿಲ್ಲ. ಬದಲಿಗೆ ಮನೆಗೆ ತೆಗೆದುಕೊಂಡು ಹೋಗಿ ನೋಡಿ ಎಂದು ಬಾಕ್ಸ್​ ಕೊಟ್ಟು ಕಳುಹಿಸಿರುತ್ತಾರೆ. ಬಳಿಕ ಮನೆಗೆ ಬಂದು ನೋಡಿದಾಗ ಮೋಸ ಹೋಗಿರುವುದು ತಿಳಿದು ರೈತ ಚಂದ್ರಶೇಖರ್​ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದೇವೆ. ಹೀಗಾಗಿ ವಿಜಯಪುರ ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ :Job fraud: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ.. ಹುಬ್ಬಳ್ಳಿಯಲ್ಲಿ ಆರೋಪಿ ಬಂಧನ

ABOUT THE AUTHOR

...view details