ವಿಜಯಪುರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಆಲಗೂರು ಗ್ರಾಮದ ಬಳಿ ಇಂದು ನಡೆದಿದೆ.
ನಾಲ್ವರು ರೈತರಿಗೆ ಸೇರಿದ 19 ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆಲಗೂರು ಗ್ರಾಮದ ರೈತರಾದ ಅಹ್ಮದ್ ಭಾಷಾ ನಾಯ್ಕೋಡಿ, ಲಾಲ್ಸಾಬ್ ನಾಯ್ಕೋಡಿ, ಅಕ್ಬರ್ ನಾಯ್ಕೋಡಿ, ದಾವಲಸಾಬ್ ನಾಯ್ಕೋಡಿ ಎಂಬುವವರಿಗೆ ಸೇರಿದ್ದ ಕಬ್ಬು ಇದಾಗಿದೆ.