ವಿಜಯಪುರ :ಜಿಲ್ಲೆಯಲ್ಲಿ ಇಂದು ಮತ್ತೆ 175 ಸೋಂಕಿತ ಪ್ರಕರಣ ದಾಖಲಾಗಿದ್ದು, ಒಟ್ಟು 2163 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ 194 ಸೋಂಕಿತರು ಗುಣಮುಖರಾಗಿದ್ದಾರೆ.
ಈವರೆಗೆ 1581 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗ ವಿಜಯಪುರ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ 558 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಈವರೆಗೆ 24 ಜನ ಮೃತಪಟ್ಟಿದ್ದಾರೆ.
ವಿಜಯಪುರ ತಾಲೂಕು-1518, ಬಸವನಬಾಗೇವಾಡಿ-150, ಬಬಲೇಶ್ವರ-23, ಚಡಚಣ-16, ದೇವರಹಿಪ್ಪರಗಿ-39, ಇಂಡಿ-88, ಕೊಲ್ಹಾರ-8, ಮುದ್ದೇಬಿಹಾಳ-82, ನಿಡಗುಂದಿ-23, ಸಿಂದಗಿ-94, ತಾಳಿಕೋಟೆ-82 ಹಾಗೂ ತಿಕೋಟಾ ತಾಲೂಕಿನಲ್ಲಿ 40 ಜನರಿಗೆ ಸೋಂಕು ತಗುಲಿದೆ.
ಒಟ್ಟು ಈವರೆಗೆ 40, 308 ಜನರ ಮೇಲೆ ನಿಗಾ ಇಡಲಾಗಿದೆ. ಅವರಲ್ಲಿ 41,098 ಜನರನ್ನು ಗಂಟಲು ದ್ರವ ಪಡೆದುಕೊಳ್ಳಲಾಗಿದೆ. ಇವರಲ್ಲಿ 38,257 ಜನರ ವರದಿ ನೆಗಟಿವ್ ಬಂದಿದ್ದು, 2163 ಪಾಸಿಟಿವ್ ಬಂದಿದೆ. ಇನ್ನೂ 678 ಜನರ ವರದಿ ಬರಬೇಕಾಗಿದೆ. 1310 ಜನ ಹೋಂ ಕ್ವಾರಂಟೈನ್ನಲ್ಲಿದ್ದಾರೆ.