ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿಂದು 16 ಮಂದಿಯಲ್ಲಿ ಸೋಂಕು ದೃಢ....222 ಮಂದಿ ಗುಣಮುಖ - ವಿಜಯಪುರ ಲೆಟೆಸ್ಟ್ ನ್ಯೂಸ್

ಇಂದು 16 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 222ಕ್ಕೆ ಏರಿದ್ದು, ಸದ್ಯ 88 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Vijayapura corona news
Vijayapura corona news

By

Published : Jun 23, 2020, 9:56 PM IST

ವಿಜಯಪುರ:ಜಿಲ್ಲೆಯಲ್ಲಿಂದು ಮತ್ತೆ 16 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.

ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 222ಕ್ಕೆ ಏರಿದೆ. ಸದ್ಯ 88 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 7ಜನ ಮಹಾಮಾರಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ನೆಗಡಿ, ಕೆಮ್ಮಿನಿಂದ ಏಳು ಜನ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಸೋಂಕು ಇರುವದು ಪತ್ತೆಯಾಗಿದೆ. P-8792ರ ಸಂಪರ್ಕದಿಂದ ಮೂವರಿಗೆ, P- 7836ರ ರಿಂದ ನಾಲ್ವರಿಗೆ ಸೋಂಕು, ಇಬ್ಬರಿಗೆ ಕಂಟೈನ್ ಮೆಂಟ್ ಝೋನ್ ನಿಂದ ಸೋಂಕು ತಗುಲಿದೆ. ಉಳಿದಂತೆ ಇಂದು ಪಾಸಿಟಿವ್ ಬಂದ 16 ಜನರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details