ಕರ್ನಾಟಕ

karnataka

ETV Bharat / state

ನೇದಲಗಿ ನೇತೃತ್ವದಲ್ಲಿ 15 ನೇ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ - 15th generak meeting in vijayapura jilla panchayath]

ಜಿ.ಪಂ. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ನೇತೃತ್ವದಲ್ಲಿ 15ನೇ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ ಜರುಗಿದ್ದು, ಸದಸ್ಯರಿಂದ ಜಿಲ್ಲೆಯಲ್ಲಿರುವ ಸಮಸ್ಯೆಗಳ ಕುರಿತ ಚರ್ಚೆ ಪ್ರತಿಧ್ಬನಿಸಿತು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ

By

Published : Oct 25, 2019, 12:02 PM IST

ವಿಜಯಪುರ:ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಜಿ.ಪಂ. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ 15 ನೇ ಸಾಮಾನ್ಯ ಸಭೆ ಜರುಗಿತು.

ಜಿಲ್ಲಾ ಪಂಚಾಯತ್​ ಸದಸ್ಯರಿಂದ ಜಿಲ್ಲೆಯ ಸಮಸ್ಯೆಗಳ ಮಹಾಪೂರವೇ ಹರಿದುಬಂದಿದ್ದು, ಮುಖ್ಯವಾಗಿ ಫಸಲ್​ ಭೀಮಾ ಯೋಜನೆಯಡಿಯಲ್ಲಿ ಕಂಪ್ಯೂಟರ್ ಆಧಾರಿತ ಸರ್ವೇಯಿಂದಾಗಿ ರೈತರಿಗೆ ಆಗುತ್ತಿರುವ ತೊಂದರೆ, ಬೆಳೆ ಹಾನಿ, ಅನಧಿಕೃತ ಗೊಬ್ಬರದ ಅಂಗಡಿಗಳು ನಿರ್ಮಾಣವಾಗಿರುವ ಬಗ್ಗೆ ತೀವ್ರ ಚರ್ಚೆಯಾಗಿ, ಮಾತಿನ ಜಟಾಪಟಿಗೆ ಕಾರಣವಾಯಿತು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ

ಜಿ.ಪಂ. ಅಧ್ಯಕ್ಷ ನೇದಲಗಿ, ಸದಸ್ಯರ ಸಮಸ್ಯೆ ಆಲಿಸಿ ಅನಧಿಕೃತ ಗೊಬ್ಬರ ಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ABOUT THE AUTHOR

...view details