ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸುವ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಜೇಬುಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಕೃಷ್ಣಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಸಿಬ್ಬಂದಿ ಸುರೇಶ ಅಂಗಡಿ ಎಂಬುವವರ ಕಿಸೆ ಕತ್ತರಿಸಿರುವ ಖದೀಮರು ₹ 15,000 ಎಗರಿಸಿದ್ದಾರೆ.

ಕೆಬಿಜೆಎನ್ಎಲ್ ಗಣ ನಿಯಂತ್ರಣ ಉಪವಿಭಾಗದಲ್ಲಿ ಸಹಾಯಕ ಸಿಬ್ಬಂದಿಯಾಗಿ ಸುರೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಎಂಗೆ ಮನವಿ ಸಲ್ಲಿಸುವ ವೇಳೆ ತಳ್ಳಾಟ ನೂಕಾಟ ನಡೆಸಿದ ಕಳ್ಳರು, ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.