ಕರ್ನಾಟಕ

karnataka

ETV Bharat / state

ಕಂಬಕ್ಕೆ ಕಟ್ಟಿ ದಲಿತ ಯುವಕನ ಹಲ್ಲೆ ಆರೋಪ: ವಿಜಯಪುರದಲ್ಲಿ 14 ಜನರ ಬಂಧನ - ದಲಿತ ಯುವಕನ ಮೇಲೆ ನಡೆದ ಹಲ್ಲೆ ಆರೋಪ ಪ್ರಕರಣ

ವಿಜಯಪುರ ತಾಲೂಕಿನ ಡೋಮನಾಳದಲ್ಲಿ ನಡೆದಿದ್ದ ದಲಿತ ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ.

14 people arrested for dalit youth assault case
ಕಂಬಕ್ಕೆ ಕಟ್ಟಿ ದಲಿತ ಯುವಕ ಮೇಲೆ ಹಲ್ಲೆ ಆರೋಪ

By

Published : Nov 12, 2022, 2:18 PM IST

Updated : Nov 12, 2022, 2:32 PM IST

ವಿಜಯಪುರ: ದಲಿತ ಯುವಕನ ಮೇಲೆ ನಡೆದ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದಲ್ಲಿ ಉರುಸ್ ನಡೆಯುತ್ತಿದ್ದ ವೇಳೆ ದಲಿತ ಯುವಕ ಸಾಗರ್ ಎಂಬಾತನನ್ನು ಕಂಬಕ್ಕೆ ಕಟ್ಟಿಹಾಕಿ ಸವರ್ಣೀಯರು ಹೊಡೆದು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.‌ ಈ ಸಂಬಂಧ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ದಲಿತ ಯುವಕನ ಮೇಲೆ ಹಲ್ಲೆ; ಬಲವಂತವಾಗಿ ಮೂತ್ರ ಮಿಶ್ರಿತ ಮದ್ಯ ಕುಡಿಸಿದ ದುಷ್ಕರ್ಮಿಗಳು

Last Updated : Nov 12, 2022, 2:32 PM IST

ABOUT THE AUTHOR

...view details