ಕರ್ನಾಟಕ

karnataka

ETV Bharat / state

13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​​ - ಬ್ಯಾಂಕ್​ನ ನಿವ್ವಳ ಲಾಭ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬಸವನ ಬಾಗೇವಾಡಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಪ್ರಕಟಿಸಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ

By

Published : Jul 28, 2019, 5:47 PM IST

ವಿಜಯಪುರ:ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬಸವನ ಬಾಗೇವಾಡಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಪ್ರಕಟಿಸಿದರು.

13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಲಾಭಾಂಶ ಹಾಗೂ ಆರ್ಥಿಕ ವಿವರಣೆ ನೀಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸಿಸಿ ಬ್ಯಾಂಕ್ 13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ 99 ವರ್ಷಗಳಲ್ಲಿಯೇ ಅತೀ ಹೆಚ್ಚಿನ ಲಾಭವಾಗಿದ್ದು, ಬ್ಯಾಂಕಿನ ಇತಿಹಾಸದಲ್ಲಿಯೇ ದಾಖಲಾರ್ಹ ಸಾಧನೆಯಾಗಿದೆ ಎಂದರು.
ಬ್ಯಾಂಕು ಪ್ರಗತಿಪಥದತ್ತ ಮುನ್ನಡೆಯುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂಕಿ ಅಂಶಗಳನ್ನು ಅವಲೋಕಿಸಲಾಗಿದೆ. 104.61 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಕಳೆದ ಬಾರಿಗಿಂತ ಶೇ. 9.62 ಕೋಟಿ ರೂ. ಹೆಚ್ಚಳವಾಗಿದೆ. ಅದರಂತೆ 208.53 ಕೋಟಿ ರೂ. ನಿಧಿ ಹೊಂದಿದ್ದು, ಕಳೆದ ಬಾರಿಗಿಂತ 6.79 ಕೋಟಿ ರೂ. ಹೆಚ್ಚಿನ ನಿಧಿಯಿದ್ದು 2869.06 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು.

ಕೃಷಿ ಪ್ರಗತಿಯನ್ನೇ ಧ್ಯೇಯವಾಗಿರಿಸಿಕೊಂಡಿರುವ ಬ್ಯಾಂಕ್, ಕೃಷಿ ಉದ್ದೇಶಕ್ಕಾಗಿ 857.18 ಕೋಟಿ ರೂ. ಸಾಲ ಪಾವತಿಸಿದ್ದು, ಕೃಷಿಯೇತರ ಉದ್ದೇಶಗಳಿಗಾಗಿ 826.08 ಕೋಟಿ ರೂ. ಸೇರಿದಂತೆ ಒಟ್ಟು 1683.26 ಕೋಟಿ ರೂ. ಸಾಲ ವಿತರಣೆ ಮಾಡಿದೆ. ಅದರಂತೆ ಸಾಲ ವಸೂಲಾತಿ ಪ್ರಮಾಣವೂ ಸಹ ಉತ್ತಮವಾಗಿದ್ದು, ಕೃಷಿ ಸಾಲ ವಸೂಲಾತಿ ಶೇ. 98.14ರಷ್ಟಾಗಿದ್ದು, ಕೃಷಿಯೇತರ ಸಾಲ ವಸೂಲಾತಿ ಪ್ರಮಾಣ ಶೇ. 86.78 ರಷ್ಟಾಗಿದೆ ಎಂದರು.

ರೈತರು ಸಹಕಾರ ಸಂಘಗಳಿಂದ, ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಇರುವ ಹೊರ ಬಾಕಿಯಲ್ಲಿ ಗರಿಷ್ಠ 50 ಸಾವಿರ ರೂ.ಗಳವರೆಗೆ ಸಾಲಮನ್ನಾ ಮಾಡಿದೆ. ಪ್ರಸ್ತುತ ರಾಜ್ಯ ಸರ್ಕಾರ ರೈತರ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಂದ ಬೆಳೆ ಸಾಲಕ್ಕೆ ಹೊರ ಬಾಕಿಯಲ್ಲಿ ಪ್ರತಿ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ಗಳವರೆಗೆ ಬೆಳೆ ಸಾಲ ಮನ್ನಾ ಮಾಡಿದೆ. ಸಾಲ ಮನ್ನಾ ಸೌಲಭ್ಯತೆ ಇರುವುದು ಬ್ಯಾಂಕಿನ ಮೇ. 2019ರವರೆಗೆ 1,38,997 ರೈತರಿಗೆ ಸಂಬಂಧಿಸಿದಂತೆ ಒಟ್ಟು 575.17 ಕೋಟಿ ರೂ. ಕ್ಲೇಮ್ ಸಲ್ಲಿಸಲಾಗಿದ್ದು, ಇದುವರೆಗೆ 67,465 ರೈತರಿಗೆ 257.61 ಕೋಟಿ ರೂ. ಮನ್ನಾ ಹಣ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ABOUT THE AUTHOR

...view details