ಕರ್ನಾಟಕ

karnataka

ETV Bharat / state

ವಿಜಯಪುರ: 121 ಮಂದಿಯಲ್ಲಿ ಕೊರೊನಾ ದೃಢ, ಮೂವರು ಸೋಂಕಿತರ ಸಾವು - Vijayapura latest news

ಕೊರೊನಾ ವೈರಸ್​​ನಿಂದ ಜಿಲ್ಲೆಯಲ್ಲಿ ಇಂದು ಮೂವರು ಮೃತಪಟ್ಟಿದ್ದು, ಹೊಸದಾಗಿ 121 ಜನರಲ್ಲಿ ‌ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

ವಿಜಯಪುರ ಕೊರೊನಾ ಪ್ರಕರಣಗಳು
ವಿಜಯಪುರ

By

Published : Aug 27, 2020, 9:33 PM IST

ವಿಜಯಪುರ: ಜಿಲ್ಲೆಯಲ್ಲಿ ಇಂದು 121 ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 6,193ಕ್ಕೆ ಏರಿಕೆಯಾಗಿದೆ.

ಮೂವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 91ಕ್ಕೆ ತಲುಪಿದೆ.

ಕೊರೊನಾದಿಂದ 176 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಈವರೆಗೆ 5,279 ಮಂದಿ ಗುಣಮುಖರಾಗಿದ್ದಾರೆ.

ವಿಜಯಪುರ ಜಿಲ್ಲಾಸ್ಪತ್ರೆ, ನಾನಾ ಖಾಸಗಿ ಆಸ್ಪತ್ರೆಗಳಲ್ಲಿ 823 ಜನರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಈವರೆಗೆ 53,827 ಜನರ ಮೇಲೆ ನಿಗಾ ಇಡಲಾಗಿದೆ. 69,845 ಜನರ ಸ್ಯಾಂಪಲ್ ಪಡೆಯಲಾಗಿದೆ. ಇವರಲ್ಲಿ 62,402 ಜನರ ವರದಿ ನೆಗಟಿವ್ ಎಂದು ಬಂದಿದೆ. 6,193 ಜನರಿಗೆ ಪಾಸಿಟಿವ್ ವರದಿ ಬಂದಿದ್ದು, ಇನ್ನೂ 1,237 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

ABOUT THE AUTHOR

...view details