ವಿಜಯಪುರ: ವಿಜಯಪುರ ಜಿಲ್ಲಾಡಳಿತ ನಡೆಸಿದ ಮನೆ ಮನೆ ಸಮೀಕ್ಷೆ ಫಲಪ್ರದವಾಗಿದ್ದು, ಜಿಲ್ಲೆಯಲ್ಲಿ 118 ಗ್ರಾಮಗಳು ಕೊರೊನಾ ಸೋಂಕು ಮುಕ್ತ ಗ್ರಾಮಗಳಾಗಿ ಗುರುತಿಸಿ ಕೊಂಡಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲೆಯ 12 ತಾಲೂಕಿನ 629 ಗ್ರಾಮಗಳಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಿಗೆ ತೆರಳಿ ಮನೆ ಮನೆ ಸಮೀಕ್ಷೆ ನಡೆಸಿದ್ದರು. ಕೋವಿಡ್ ಲಕ್ಷ್ಮಣಗಳು ಕಂಡು ಬಂದ ಎಲ್ಲರಿಗೂ ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಲಾಗಿತ್ತು. ಸಮೀಕ್ಷೆ ಮುಗಿದ ನಂತರ ಒಟ್ಟು 118 ಗ್ರಾಮಗಳು ಕೊರೊನಾ ಸೊಂಕು ಮುಕ್ತ ಗ್ರಾಮಗಳಾಗಿ ಗುರುತಿಸಲಾಗಿದೆ. ಅದರಲ್ಲಿ ವಿಜಯಪುರ ತಾಲೂಕಿನಲ್ಲಿ 22, ಮುದ್ದೇಬಿಹಾಳ 23, ಸಿಂದಗಿ 18, ಇಂಡಿ 12 ಹಾಗೂ ಬಸವನಬಾಗೇವಾಡಿ ತಾಲೂಕಿನಲ್ಲಿ ಅತಿ ಹೆಚ್ಚು 43 ಗ್ರಾಮಗಳು ಸೇರಿ ಒಟ್ಟು 118 ಗ್ರಾಮಗಳು ಕೊರೊನಾ ಸೊಂಕು ಮುಕ್ತವಾಗಿವೆ.