ವಿಜಯಪುರ:ಜಿಲ್ಲೆಯಲ್ಲಿಂದು 118 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,238ಕ್ಕೆ ಏರಿದೆ.
85 ವರ್ಷದ ವೃದ್ಧರೊಬ್ಬರು ಕೊವಿಡ್‌ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ ಕೊರೊನಾ ಪಾಸಿಟಿವ್ ಪ್ರಕರಣದಲ್ಲಿ 68 ಪುರುಷರು, 30 ಮಹಿಳೆಯರು, ಇಬ್ಬರು ಯುವಕರು, 7 ಜನ ಯುವತಿಯರು, 6 ಬಾಲಕರು ಹಾಗೂ 1 ವರ್ಷದ ಬಾಲಕಿ ಸೇರಿ 5 ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ.
ತಾಳಿಕೋಟೆಯ 85 ವರ್ಷದ ವೃದ್ಧ (P–35217) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜುಲೈ 12 ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜುಲೈ 17ರಂದು ಸಾವನ್ನಪ್ಪಿದ್ದಾರೆ. ಸರ್ಕಾರದ ನಿಯಮದಂತೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇಂದು 84 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 803ಕ್ಕೆ ತಲುಪಿದೆ. ಆಸ್ಪತ್ರೆಯಲ್ಲಿ ಸದ್ಯ 415 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 296 ಕಂಟೈನ್‌ಮೆಂಟ್ ವಲಯ ಗುರುತಿಸಲಾಗಿದೆ. ಈ ಪೈಕಿ 191 ವಲಯಗಳು ಚಾಲ್ತಿಯಲ್ಲಿದ್ದು,105 ಡಿ-ನೋಟಿಫೈ ಮಾಡಲಾಗಿದೆ.
35 ಸಾವಿರ ನೆಗೆಟಿವ್:ಜಿಲ್ಲೆಯಲ್ಲಿ ಒಟ್ಟು 39,836 ಜನರ ಮೇಲೆ ನಿಗಾ ಇಡಲಾಗಿದೆ. ಇವರಲ್ಲಿ 38,223 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, 35,799 ಜನರ ವರದಿ ನೆಗೆಟಿವ್ ಬಂದಿದೆ. 1,238 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ 1,186 ಜನರ ವರದಿ ಬರಬೇಕಾಗಿದೆ. ಸದ್ಯ 1,626 ಜನ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.