ವಿಜಯಪುರ: ಜಿಲ್ಲೆಯಲ್ಲಿ ಇಂದು ಸಹ ಕೊರೊನಾ ಪ್ರಕರಣ ಶತಕ ಬಾರಿಸಿದೆ. ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 110 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 2,405ಕ್ಕೆ ಏರಿಕೆಯಾಗಿದೆ.
ವಿಜಯಪುರದಲ್ಲಿ ಒಂದೇ ದಿನ 110 ಕೊರೊನಾ ಕೇಸ್ ದೃಢ... ಇಬ್ಬರು ಬಲಿ! - Vijayapura corona case
ರಾಜ್ಯದಲ್ಲಿ ಕೊರೊನಾ ಆರ್ಭಟ ಇಂದು ಸಹ ಮುಂದುವರೆದಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಶತಕ ಬಾರಿಸಿದ್ದು, ಇಬ್ಬರು ಬಲಿಯಾಗಿದ್ದಾರೆ. ಈ ನಡುವೆ 20 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಜಯಪುರದಲ್ಲಿ ಒಂದೇ ದಿನ 110 ಕೊರೊನಾ ಕೇಸ್ ದೃಢ...ಇಬ್ಬರು ಬಲಿ
ಇಂದು 20 ಜನ ಸೇರಿ ಇಲ್ಲಿಯವರೆಗೆ 1,744 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 634 ಸೋಂಕಿತರು ಜಿಲ್ಲಾ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಇಬ್ಬರು ಸೇರಿ ಜಿಲ್ಲೆಯಲ್ಲಿ ಈವರೆಗೆ 27 ಮಂದಿ ಮೃತಪಟ್ಟಿದ್ದಾರೆ.