ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಒಂದೇ ದಿನ 11 ಪ್ರಕರಣ ಪತ್ತೆ: 32ಕ್ಕೆ ತಲುಪಿದ ಸೋಂಕಿತರು - 11 case detection in a single day

ವಿಜಯಪುರ ಜಿಲ್ಲೆಯಲ್ಲಿ ಇಂದು 11 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಪೀಡಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

Hospital
ಆಸ್ಪತ್ರೆ

By

Published : Apr 20, 2020, 7:28 PM IST

ವಿಜಯಪುರ: ಕೊರೊನಾ ವೈರಸ್ ಹಾವಳಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಇಂದು ಒಂದೇ ದಿನ 11 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸೋಮವಾರ ಕಂಡು ಬಂದ ಪ್ರಕರಣಗಳ ಸಂಖ್ಯೆ ಜನರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ನಿನ್ನೆ ಒಂದೇ ಒಂದು ಪ್ರಕರಣ ಪತ್ತೆಯಾಗಿರಲಿಲ್ಲ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕೇವಲ ಒಂದು ವಾರದಲ್ಲಿ 32ಕ್ಕೆ ಏರಿಕೆ ಕಂಡಿದ್ದು, ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ.

  • ರೋಗಿ-397 (ಬಾಲಕಿ, 7 ವರ್ಷ)
  • ರೋಗಿ-398 (ಪುರುಷ, 35 ವರ್ಷ)
  • ರೋಗಿ-399 (ಯುವತಿ, 27ವರ್ಷ)
  • ರೋಗಿ-400 (ಯುವತಿ 25 ವರ್ಷ)
  • ರೋಗಿ-401 (ಯುವತಿ, 21 ವರ್ಷ)
  • ರೋಗಿ-402 (ಯುವತಿ, 28 ವರ್ಷ)
  • ರೋಗಿ-403 (ಮಹಿಳೆ, 47 ವರ್ಷ)
  • ರೋಗಿ-404 (ಬಾಲಕ, 10 ವರ್ಷ)
  • ರೋಗಿ-405 (ಮಹಿಳೆ, 35 ವರ್ಷ)
  • ರೋಗಿ-406 (ಮಹಿಳೆ, 38 ವರ್ಷ)
  • ರೋಗಿ-407 (ಬಾಲಕ, 14 ವರ್ಷ)

ರೋಗಿ-221 ನಿಂದ 397, 398, 399, 400, 404, 406, 407ಗೆ, ಹಾಗೆಯೇ ರೋಗಿ-362 ಸಂಪರ್ಕದಿಂದ 401, 402, 403ಗೆ ಸೋಂಕು‌ ತಗುಲಿದೆ. ರೋಗಿ-228 ಮೂಲಕ ರೋಗಿ-405ಗೆ ಸೋಂಕು ತಗುಲಿದೆ.

ನಿನ್ನೆವರೆಗೂ 21 ಜನರಿಗೆ ಸೋಂಕು ಪತ್ತೆಯಾಗಿತ್ತು. ಇಂದು ಒಮ್ಮೆಗೆ 11 ಪಾಸಿಟಿವ್ ಬೆಳಕಿಗೆ ಬರುವ ಮೂಲಕ ಸೋಂಕಿತರ ಸಂಖ್ಯೆ 32ಕ್ಕೆ ಜಿಗಿತ ಕಂಡಿದೆ.

ABOUT THE AUTHOR

...view details