ಮುದ್ದೇಬಿಹಾಳ (ವಿಜಯಪುರ):ಒಂದು ವರ್ಷ ಹನ್ನೊಂದು ತಿಂಗಳ ಮಗುವೊಂದು ತನ್ನಲ್ಲಿರುವ ಅಸಾಮಾನ್ಯ ಬುದ್ಧಿಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದೆ. ಈ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಆ ಮಗು ಹೆಚ್ಚಿಸಿದೆ. ಮೂಲತಃ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದವರಾದ ಚಂದ್ರು ಹಾಗೂ ಶಿಲ್ಪಾ ಗಣಾಚಾರಿ ದಂಪತಿಯ ಪುತ್ರ ಗಗನದೀಪ್ ಗಣಾಚಾರಿ ಈ ಸಾಧನೆ ಮಾಡಿದ್ದಾರೆ.
ತಂದೆ ಮುದ್ದೇಬಿಹಾಳ ಪಟ್ಟಣದ ಅಹಲ್ಯಾದೇವಿ ಹೋಳ್ಕರ ಪತ್ತಿನ ಸಹಕಾರಿ ಸಂಘದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಗಗನ್‍ದೀಪ್‍ಗೆ ಹಲವು ಕಲೆಗಳು ಕರಗತವಾಗಿವೆ. ಆತನ ಜ್ಞಾನಶಕ್ತಿಯನ್ನು ಕಂಡು ಸ್ವತಃ ತಾಯಿಯೇ ಬೆರಗಾಗಿದ್ದು, ಅದನ್ನು ವಿಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಕಳಿಸಿದ್ದರು. ಅಲ್ಲಿಂದ ಬಾಲಕನ ಅಸಾಮಾನ್ಯ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಡಾ.ಬಿಷಪ್‍ರಾಯ್ ಚೌಧರಿ ಪ್ರಶಂಸನಾಪತ್ರ ಕಳುಹಿಸಿದ್ದಾರೆ.