ಕರ್ನಾಟಕ

karnataka

ETV Bharat / state

ಪರಿಸರ ಕಾಳಜಿ ಬೆಳೆಸಲು ಕೋಟಿ ವೃಕ್ಷ ಅಭಿಯಾನ - undefined

ವಿಜಯಪುರದಲ್ಲಿ ಕೋಟಿ ವೃಕ್ಷ ಅಭಿಯಾನದ ಕುರಿತು ಜಾಗೃತಿ ಮೂಡಿಸಲೆಂದು, ಐತಿಹಾಸಿಕ ಗಗನ ಮಹಲ್ವರ ಆಣದಲ್ಲಿ ಜನರಿಗೆ ಸಸಿ ವಿತರಿಸಿಮ್ಯಾ ರಾಥಾನ್ ನಲ್ಲಿ ಭಾಗವಹಿಸಿ ಎಂದು ಆಮಂತ್ರಣ ನೀಡಲಾಯಿತು.

ವೃಕ್ಷ ಅಭಿಯಾನ

By

Published : Jul 25, 2019, 10:41 PM IST

ವಿಜಯಪುರ:ವಿಜಯಪುರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಕೋಟಿ ವೃಕ್ಷ ಅಭಿಯಾನವು ಈ ಬಾರಿ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ ಹಾಗೂ ಬಿ.ಎಲ್. ಡಿ.ಈ. ಸಂಸ್ಥೆಯ ಸಹಯೋಗದಲ್ಲಿ ವೃಕ್ಷೋತ್ಥಾನ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವ ಉದ್ದೇಶ ಮಾತ್ರವಲ್ಲದೇ ಜಿಲ್ಲೆಯ ಜನರ ಆರೋಗ್ಯ ಹಾಗೂ ಉತ್ತಮ ಪರಿಸರ ರೂಪಿಸುವಲ್ಲಿಯೂ ಸಹಕಾರಿಯಾಗಲಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಕೈ ಡಿಸುಜೋವಂತೆ ಕರೆ ನೀಡಲಾಯಿತು.

ಪರಿಸರ ಕಾಳಜಿ ಬೆಳೆಸಲು ಕೋಟಿ ವೃಕ್ಷ ಅಭಿಯಾನ

ಪ್ರತಿಯೊಬ್ಬರು ಒಂದೊಂದು ಸಸಿ ನೆಡಬೇಕು ಹಾಗೂ ಅದನ್ನು ಪೋಷಿಸಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ವೃಕ್ಷೋತ್ಥಾನದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. ಈಗಾಗಲೇ 75 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಕೋಟಿವೃಕ್ಷ ಯೋಜನೆಗೆ ಇನ್ನೂ 25 ಲಕ್ಷ ಸಸಿ ನೆಡುವ ಅಗತ್ಯವಿದೆ ಎಂದು ಮನವಿ ಮಾಡಿದರು. ಕಳೆದ ಎರಡು ವರ್ಷಗಳಿಂದ ವೃಕ್ಷೋತ್ಥಾನ ಅಂಗವಾಗಿ ನಡೆಯುವ ಮ್ಯಾರಾಥಾನ್ ಸ್ಪರ್ಧೆಯನ್ನು ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಉದ್ಗಾಟಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ವಿಭಾಗಗಳ 18 ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಭಾಗವಹಿಸುವವರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮ್ಯಾರಾಥಾನ್‌ನಲ್ಲಿ ಭಾಗವಹಿಸುವ ಎಲ್ಲರಿಗೂ ಪದಕ ನೀಡಲಾಗುತ್ತದೆ‌. ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ನೀಡುವ ನಿಟ್ಟಿನಲ್ಲಿ ಎಲ್ಲರೂ ಜೊತೆಗೂಡಿ ಸಸಿಗಳನ್ನ ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಯಿತು.

For All Latest Updates

TAGGED:

ABOUT THE AUTHOR

...view details