ಕರ್ನಾಟಕ

karnataka

ETV Bharat / state

ಮೇಲಾಧಿಕಾರಿ ಕಿರುಕುಳ ಆರೋಪ: ಉತ್ತರ ಕನ್ನಡ ಜಿ ಪಂ ಅಧಿಕಾರಿ ಆತ್ಮಹತ್ಯೆ - ಜಿಲ್ಲಾ ಪಂಚಾಯಿತಿ ಅಧಿಕಾರಿ ಆತ್ಮಹತ್ಯೆ

ನದಿಗೆ ಹಾರಿ ಜಿಲ್ಲಾ ಪಂಚಾಯಿತಿ ಅಧಿಕಾರಿ ಆತ್ಮಹತ್ಯೆ. ಕೆಲಸದ ಒತ್ತಡ ಹಾಗೂ ಮೇಲಾಧಿಕಾರಿಗಳ ಕಿರುಕುಳದಿಂದಾಗಿ ಆತ್ಮಹತ್ಯೆ ಆರೋಪ. ಮೃತನ ತಂದೆಯಿಂದ ದೂರು.

ZP Officer commits suicide in Karwar
ಕಾರವಾರದಲ್ಲಿ ಜಿಪಂ ಅಧಿಕಾರಿ ಆತ್ಮಹತ್ಯೆ

By

Published : Dec 5, 2022, 6:43 AM IST

ಕಾರವಾರ:ಜಿಲ್ಲಾ ಪಂಚಾಯಿತಿ ಉದ್ಯೋಗಿಯೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರದ ಕಾಳಿ ನದಿ ಸೇತುವೆ ಬಳಿ ನಡೆದಿದೆ. ಶ್ರೀಕಾಂತ ಮೇಲಿನಮನೆ (38) ಮೃತ ವ್ಯಕ್ತಿ.

ಕಾರವಾರ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಾಜೆಕ್ಟ್ ಆಫೀಸರ್ ಆಗಿದ್ದ ಶ್ರೀಕಾಂತ ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕ ಕೆಲಸದ ಒತ್ತಡ, ಮೇಲಾಧಿಕಾರಿಗಳ ಕಿರುಕುಳದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ತಮ್ಮಣ್ಣ ಚನ್ನಬಸಪ್ಪ ಮೇಲಿನಮನೆ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಉಳ್ಳಾಲದ ಬಾವಿಯಲ್ಲಿ ಬೆಂಗಳೂರು ಯುವಕನ ಮೃತದೇಹ ಪತ್ತೆ

ABOUT THE AUTHOR

...view details