ಕಾರವಾರ:ಸಮುದ್ರದಲ್ಲಿ ಸ್ನೇಹಿತರೊಂದಿಗೆ ಈಜಲು ನೀರಿಗಿಳಿದಿದ್ದ ಯುವಕನೋರ್ವ ಅಲೆಗೆ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಇಂದು ನಡೆದಿದೆ.
ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನಾಪತ್ತೆಯಾದ ಯುವಕ. ಬೆಂಗಳೂರಿನಿಂದ 8 ಮಂದಿ ಸ್ನೇಹಿತರು ಸೇರಿ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಭಾರಿ ಅಲೆಗಳ ಅಬ್ಬರದ ನಡುವೆಯೂ ನೀರಿಗೆ ಇಳಿಯಲು ಮುಂದಾದವರಿಗೆ ಸ್ಥಳೀಯರು ಅಲೆ ಜೋರಾಗಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೂ 8 ಮಂದಿ ಯುವಕರು ಈಜಲು ಸಮುದ್ರಕ್ಕೆ ಇಳಿದು ಮಸ್ತಿಯಲ್ಲಿ ತೊಡಗಿದ್ದರು.