ಭಟ್ಕಳ :ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನದಿಗೆ ಇಳಿದಿದ್ದ ಯುವಕನೋರ್ವ ನೀರು ಪಾಲಾದ ಘಟನೆ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಗಟೆ ಬೈಲ್‌ನ ವೆಂಕಟಪುರ ನದಿಯಲ್ಲಿ ನಡೆದಿದೆ.
ನದಿ ನೀರಿನಲ್ಲಿ ಯುವಕನ ಶವ ಹೊರ ತೆಗೆದ ಸ್ಥಳೀಯ ಯುವಕರು.. ಜಯಂತ ರಾಮಗೊಂಡ (19) ಮೃತ ಯುವಕ ಎಂದು ಗುರುತಿಸಲಾಗಿದೆ. ಈತ ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲೆಂದು ನದಿಗೆ ಇಳಿದಾಗ ಆಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.
ವಿಷಯ ತಿಳಿದು ವೆಂಕಟಪುರ ಹೂಳೆಯಲ್ಲಿ ಸ್ಥಳೀಯ ಯುವಕರು ಹುಡುಕಾಟ ನಡೆಸಿ ಯುವಕನ ಮೃತದೇಹವನ್ನು ದಡಕ್ಕೆ ತಂದಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಓದಿ: ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆ ಯತ್ನ ಪ್ರಕರಣ : ಐವರ ಬಂಧನ, ಹತ್ಯೆಗೆ 6 ತಿಂಗಳ ಹಿಂದೆ ಸ್ಕೆಚ್
ಸ್ಥಳಕ್ಕೆ ಗ್ರಾಮೀಣ ಠಾಣೆ ಪಿಎಸ್ಐ ಭರತ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ.