ಭಟ್ಕಳ:ಮನೆ ಟೆರಸ್ ಮೇಲೆ ನಿಂತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಕಾರ್ಸ್ಟ್ರೀಟ್ ಬಳಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಯುವಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ - ಭಟ್ಕಳ ಲೇಟೆಸ್ಟ್ ನ್ಯೂಸ್
ಮನೆ ಟೆರಸ್ ಮೇಲೆ ನಿಂತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪಿದ್ದರೆ, ಆತನ ಜೊತೆಗಿದ್ದ ಮತ್ತೊಬ್ಬ ಗಂಭಿತವಾಗಿ ಗಾಯಗೊಂಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ವಿದ್ಯುತ್ ತಂಗಿ ತಗುಲಿ ಓರ್ವ ಸಾವು, ಮತ್ತೊರ್ವ ಗಂಭೀರ
ಮೊಹಮ್ಮದ್ ಫಹಾದ್ ಫಾರಿಕ್ ಮನಿಯಾರ (18) ಮೃತ ಯುವಕ. ಹಜಪ್ ಫಾರಿಕ್ ಮನಿಯಾರ (15) ಗಾಯಗೊಂಡಿರುವ ಯುವಕ. ಈ ಇಬ್ಬರು ಸಹೋದರರು ತಮ್ಮ ಮನೆಯ ಮೇಲಿನ ಟೆರಸ್ ಮೇಲೆ ನಿಂತಿದ್ದರು. ಆಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅಕ್ಕ- ಪಕ್ಕದ ಮನೆಯವರು ಯುವಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಇನ್ನು ಗಾಯಗೊಂಡ ಮತ್ತೊಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.