ಕಾರವಾರ:ಹೊನ್ನಾವರದಲ್ಲಿ ಇತ್ತೀಚೆಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಭೀಕರ ಕೊಲೆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ವಂತ ಅಣ್ಣನನ್ನೇ ಬೇಡ ಅಂದ್ರೂ ತಮ್ಮಂದಿರು ರಾಡ್ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿರುವ ಘಟನೆ ಉತ್ತರಕನ್ನಡದಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತೊಟ್ಟಿಲುಗುಂಡಿ ಗ್ರಾಮದಲ್ಲಿ, ನವೆಂಬರ್ 5 ರಂದು ಸಂಜೆ 5 ಗಂಟೆಗೆ ಅಣ್ಣ ತಮ್ಮಂದಿರ ನಡುವೆ ಅಡಕೆ ತೋಟ ಭಾಗ ಮಾಡುವ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ, ಮಾತಿಗೆ ಮಾತು ಬೆಳೆದು ಸ್ವಂತ ಅಣ್ಣನಾದ ಹನುಮಂತ ನಾಯ್ಕ್ (54) ಎಂಬಾತನ ಮೇಲೆ ತಮ್ಮಂದಿರಾದ ವಿನಾಯಕ ಮತ್ತು ಚಿದಂಬರ ಹಾಗೂ ಮಂಜುನಾಥ ಸೇರಿ ರಾಡ್ನಿಂದ ಹಲ್ಲೆ ಮಾಡಿದ್ದಾರೆ.