ಕರ್ನಾಟಕ

karnataka

ETV Bharat / state

ಸೈಕ್ಲಿಂಗ್‌ ವೇಳೆ ಮರಕ್ಕೆ ಡಿಕ್ಕಿ: ದಾಂಡೇಲಿಯಲ್ಲಿ ಛತ್ತೀಸ್‌ಗಡದ ವೈದ್ಯಕೀಯ ವಿದ್ಯಾರ್ಥಿನಿ ಸಾವು - ಸೈಕ್ಲಿಂಗ್ ವೇಳೆ ವಿದ್ಯಾರ್ಥಿನಿ ಸಾವು

ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡ ಸೈಕಲ್‌ ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Young Women dies at Karwar
Young Women dies at Karwar

By

Published : Mar 3, 2022, 10:23 PM IST

ದಾಂಡೇಲಿ(ಕಾರವಾರ): ಪ್ರವಾಸಕ್ಕೆ ಬಂದಿದ್ದ ಛತ್ತೀಸ್‌ಗಡ ಮೂಲದ ಯುವತಿಯೋರ್ವಳು ಸೈಕ್ಲಿಂಗ್ ಮಾಡುವಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ದಾಂಡೇಲಿಯ ಬಿರಂಪಾಲಿ ಬಳಿ ನಡೆದಿದೆ.

ಛತ್ತೀಸ್‌ಗಢದ ದೇವಿಕಾ ಸಂಜಯ್ ವಾಸವಣೆ (25) ಮೃತಪಟ್ಟ ಯುವತಿ. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಇವರು ಧಾರವಾಡಕ್ಕೆ ಸೆಮಿನಾರ್​ಗೆ ಆಗಮಿಸಿದ್ದರು. ರಜಾ ಇರುವ ಹಿನ್ನೆಲೆಯಲ್ಲಿ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಆಗಮಿಸಿದ್ದರು.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನ ಮುಕ್ತಾಯ: ಶೇ 55.8ರಷ್ಟು ವೋಟಿಂಗ್​​

ದಾಂಡೇಲಿಯಲ್ಲಿ ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರ ಜತೆ ದೇವಿಕಾ ತಂಗಿದ್ದರು. ಈ ವೇಳೆ ಸೈಕ್ಲಿಂಗ್ ಮಾಡುವಾಗ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಯುವತಿಯ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು ಮೂಗಿನಿಂದ ರಕ್ತಸ್ರಾವವಾಗಿತ್ತು. ಪರಿಣಾಮ, ಯುವತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ.

ABOUT THE AUTHOR

...view details