ಕಾರವಾರ:ಬಟ್ಟೆ ಅಂಗಡಿಗೆ ತೆರಳಿದ್ದ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ಕುಮಟಾ ತಾಲೂಕಿನ ಸಂತೇಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ತಮ್ಮ ಮಗಳು ಬಾನು ಅಲಿಸಾಬ್ ಸಾಬ ಫೆ. 3ರಂದು ಬೆಳಗ್ಗೆ ಬಟ್ಟೆ ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದವಳು, ಮತ್ತೆ ಮರಳಿ ಬಂದಿಲ್ಲ. ಆಕೆಯ ಬಗ್ಗೆ ಅಂಗಡಿಯಲ್ಲೂ ವಿಚಾರಿಸಲಾಗಿದೆ. ಅಲ್ಲಿಗೂ ತೆರಳಿಲ್ಲ ಎಂದು ಯುವತಿಯ ತಂದೆ ಅಲಿಸಾಬ್ ಅಬ್ದುಲ್ ಕರೀಂ ಸಾಬ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.