ಭಟ್ಕಳ: ತಾಲೂಕಿನ ಜಾಲಿ ಶೇಡಕುಳಿ ಹೊಂಡ ವ್ಯಾಪ್ತಿಯಲ್ಲಿ ಯುವತಿಯೋರ್ವಳು ಅಡುಗೆ ಮಾಡುವ ವೇಳೆ ಕುಕ್ಕರ್ ಸಿಡಿದು ಮುಕ್ಕಾಲು ಪ್ರತಿಶತ ಮುಖ ಸುಟ್ಟು ಹೋಗಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಅಡುಗೆ ಮಾಡುವಾಗ ಕುಕ್ಕರ್ ಸಿಡಿದು ಯುವತಿಗೆ ಗಾಯ...! - ಭಟ್ಕಳ ತಾಲೂಕಿನ ಜಾಲಿ ಶೇಡಕುಳಿ ಹೊಂಡ ವ್ಯಾಪ್ತಿ
ಭಟ್ಕಳ ತಾಲೂಕಿನ ಜಾಲಿ ಶೇಡಕುಳಿ ಹೊಂಡ ವ್ಯಾಪ್ತಿಯಲ್ಲಿ ಯುವತಿಯೋರ್ವಳು ಅಡುಗೆ ಮಾಡುವ ವೇಳೆ ಕುಕ್ಕರ್ ಸಿಡಿದು ಮುಕ್ಕಾಲು ಪ್ರತಿಶತ ಮುಖ ಸುಟ್ಟು ಹೋಗಿರುವ ಘಟನೆ ಬುಧವಾರದಂದು ಮುಂಜಾನೆ ನಡೆದಿದೆ.
ರೇವತಿ ರಾಮಗೊಂಡ (21) ಗಾಯಗೊಂಡ ಯುವತಿ. ಈಕೆಯ ಸಹೋದರ ಕೆಲಸಕ್ಕೆ ಹಾಗೂ ತಾಯಿ ಆಕೆಯ ತಮ್ಮನ ಮನೆಗೆ ಹೋಗಿದ್ದವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಯುವತಿಯೊಬ್ಬಳೇ ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ದಿಢೀರ್ ಕುಕ್ಕರ್ ಸ್ಪೋಟಗೊಂಡು ಯುವತಿಯ ಮುಖದ ಮುಕ್ಕಾಲು ಭಾಗ ಸುಟ್ಟು ಹೋಗಿದೆ.
ಸ್ಪೋಟದ ರಭಸಕ್ಕೆ ಯುವತಿ ಕಂಗಾಲಾಗಿ ಕಿರುಚಿಕೊಂಡಿದ್ದ ಹಿನ್ನೆಲೆ ಮನೆಯ ಅಕ್ಕಪಕ್ಕದವರು, ಸ್ಥಳೀಯರು ಭಟ್ಕಳ ತಾಲೂಕಾಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.