ಭಟ್ಕಳ:ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 18 ವರ್ಷ ಪೂರೈಸಿದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮಿಂಚಿನ ನೋಂದಣಿ ಜಾಥಾ ಹಮ್ಮಿಗೊಳ್ಳಲಾಗಿದ್ದು, ಇದಕ್ಕೆ ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಭಟ್ಕಳದಲ್ಲಿ ಯುವ ಮತದಾರರ ಮಿಂಚಿನ ನೋಂದಣಿ ಜಾಗೃತಿ ಜಾಥಾ - ಮಿಂಚಿನ ನೋಂದಣಿ ಜಾಗೃತಿ ಜಾಥಾ
18 ವರ್ಷ ಪೂರೈಸಿದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಭಟ್ಕಳದಲ್ಲಿ ಮಿಂಚಿನ ನೋಂದಣಿ ಜಾಥಾ ಹಮ್ಮಿಗೊಳ್ಳಲಾಗಿತ್ತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನವರಿ 1- 2020ಕ್ಕೆ ಅನ್ವಯವಾಗುವಂತೆ 18 ವರ್ಷಗಳನ್ನು ಪೂರೈಸಿದ ಮತದಾರರು ನಮೂನೆ ನಂ.6ರನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗಳ ಮೂಲಕ ಮತದಾರರ ನೊಂದಣಾಧಿಕಾರಿಗಳಿಗೆ ಸಲ್ಲಿಸಬೇಕು. ನಮೂನೆ ನಂ. 6ರ ಜೊತೆಗೆ ವಿಳಾಸ ದೃಢಿಕರಣ, ಜನನ ಪ್ರಮಾಣ ಪತ್ರ ಹಾಗೂ ಒಂದು ಪೋಟೊವನ್ನು ಸಲ್ಲಿಸಬೇಕು ಎಂದರು.
ಈ ಮಿಂಚಿನ ನೋಂದಣಿ ಕಾರ್ಯಕ್ರಮವೂ ಜನವರಿ 6ರಿಂದ 8ರ ತನಕ ನಡೆಯಲಿದ್ದು, ಯುವ ಮತದಾರರು ಇದರ ಪ್ರಯೋಜನ ಪಡೆದು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕು. ಇನ್ನು ಮತಗಟ್ಟೆ ಅಧಿಕಾರಿಗಳ ಬದಲಿಗೆ ನಮೂನೆ ನಂ. 6ರನ್ನು ಭರ್ತಿ ಮಾಡಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ತಹಸೀಲ್ದಾರ ಕಛೇರಿಗೂ ಸಲ್ಲಿಸಬಹುದು ಎಂದು ತಿಳಿಸಿದರು.
TAGGED:
ಮಿಂಚಿನ ನೋಂದಣಿ ಜಾಗೃತಿ ಜಾಥಾ