ಕರ್ನಾಟಕ

karnataka

ETV Bharat / state

ಮುಂಡಗೋಡ: ಮೀನು ಹಿಡಿಯಲು ಹೋದ ಯುವಕ ಸಾವು - Mundagodu Taluk Malagi

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಮಳಗಿ ಬಳಿ ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟಿದ್ದಾನೆ

died by sinking in lake
ಕೆರೆಯಲ್ಲಿ ಮುಳುಗಿ ಸಾವು

By

Published : Jun 6, 2021, 8:04 AM IST

ಕಾರವಾರ: ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮುಂಡಗೋಡ ತಾಲೂಕಿನ ಮಳಗಿ ಬಳಿಯ ನಾಗಿನಕೆರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಮಳಗಿ ಸಿದ್ದಾಪುರ ಓಣಿ ನಿವಾಸಿ ಉಮೇಶ ಬೋವಿವಡ್ಡರ್ (28) ಮೃತ ದುರ್ದೈವಿ. ಈತ ಸಂಜೆ ವೇಳೆ ಮೀನು ಹಿಡಿಯಲು ಕೆರೆಗೆ ತೆರಳಿದ್ದಾಗ ನೀರಿನಲ್ಲಿ ಮುಳುಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಕೆರೆಯಲ್ಲಿ ಹುಡುಕಾಡಿ ಕೊನೆಗೆ ಮೃತದೇಹವನ್ನು ಮೇಲೆತ್ತಿದ್ದಾರೆ.

ಯುವಕನ ಮೃತದೇಹವನ್ನು ಸ್ಥಳೀಯರು ನೀರಿನಿಂದ ಮೇಲೆತ್ತಿದರು.

ಯುವಕನ ಶವ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಮುಂಡಗೋಡು ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ : ಯಾಕೆ ಮಾಸ್ಕ್ ಧರಿಸಿಲ್ಲ ಎಂದು ಪ್ರಶ್ನಿಸಿದ ಪೊಲೀಸ್ ಮೇಲೆ ಯುವಕನಿಂದ ಹಲ್ಲೆ

ABOUT THE AUTHOR

...view details