ಕಾರವಾರ:ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳ ಪೈಕಿ ಜೆಡಿಎಸ್ ಅಭ್ಯರ್ಥಿ ಸೇರಿ ಐವರು ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.
ಯಲ್ಲಾಪುರ - ಮುಂಡಗೋಡದಲ್ಲಿ ಠೇವಣಿ ಕಳೆದುಕೊಂಡ ಐವರು ಅಭ್ಯರ್ಥಿಗಳು - ಯಲ್ಲಾಪುರ ಉಪಚುನಾವಣೆ ಇತ್ತೀಚಿನ ಸುದ್ದಿಗಳು
ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ನೇರ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ಧ 31,406 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿದರೆ, ಉಳಿದ ಐವರು ಅಭ್ಯರ್ಥಿಗಳು ಕಡಿಮೆ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಚುನಾವಣಾ ಆಯೋಗದ ನಿಯಮ ಪ್ರಕಾರ, ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯದಿದ್ದರೆ, ಅಭ್ಯರ್ಥಿಗಳು ಕಟ್ಟಿದ್ದ 10,000 (ಮೀಸಲು ಕ್ಷೇತ್ರಕ್ಕೆ ₹ 5,000) ಠೇವಣಿ ಜಪ್ತಿಯಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ 1,235, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್ 281, ಕರ್ನಾಟಕ ರಾಷ್ಟ್ರ ಸಮಿತಿಯ ಜೈತುನಾಬಿ ಜಿಗಳೂರು 433, ಪಕ್ಷೇತರ ಅಭ್ಯರ್ಥಿಗಳಾದ ಮಹೇಶ್ ಹೆಗ್ಡೆ 301, ಚಿದಾನಂದ ಹರಿಜನ 413 ಮತಗಳು ಪಡೆದಿದ್ದು ಠೇವಣಿ ಕಳೆದುಕೊಂಡಿದ್ದಾರೆ.