ಕರ್ನಾಟಕ

karnataka

ETV Bharat / state

ಯಾಸ್ ಚಂಡಮಾರುತದ ಎಫೆಕ್ಟ್ : ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆ - ತೌಕ್ತೆ ಅಬ್ಬರದ ಬಳಿಕ ಉತ್ತರಕನ್ನಡ ಜಿಲ್ಲೆ

ಬಹುತೇಕ ಬೋಟ್‌ಗಳು ಈಗಾಗಲೇ ಲಂಗರು ಹಾಕಿರುವುದರಿಂದ ಮೀನುಗಾರಿಕೆಗೆ ತೆರಳಿದ ಕೆಲ ಬೋಟ್‌ಗಳು ಕೂಡ ವಾಪಸ್ ಆಗಿವೆ. ಇನ್ನು, ಎರಡು ದಿನಗಳ ಕಾಲ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ..

Yas Storm Effect
ಯಾಸ್ ಚಂಡಮಾರುತದ ಎಫೆಕ್ಟ್

By

Published : May 28, 2021, 9:31 PM IST

ಕಾರವಾರ :ಹವಾಮಾನ ಇಲಾಖೆ ಮುನ್ಸೂಚನೆಯಂತೆ ಯಾಸ್ ಚಂಡಮಾರುತದ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಗೂ ತಟ್ಟಿದೆ. ಜಿಲ್ಲೆಯ ವಿವಿಧೆಡೆ ಇಂದು ಸಂಜೆಯಾಗುತ್ತಿದ್ದಂತೆ ಭಾರಿ ಮಳೆಯಾಗತೊಡಗಿದೆ.

ಓದಿ: ರಾಜ್ಯದಲ್ಲಿ ತಗ್ಗಿದ ಕೊರೊನಾ: ದಾಖಲೆಯ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖ

ತೌಕ್ತೆ ಅಬ್ಬರದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಕಡಿಮೆಯಾಗಿದ್ದ ಮಳೆ ಇಂದು ಮತ್ತೆ ಜೋರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ, ಸಂಜೆ ಬಳಿಕ ಜೋರಾಗಿದೆ. ಯಾಸ್ ಚಂಡಮಾರುತದ ಎಫೆಕ್ಟ್ ಜಿಲ್ಲೆಗೂ ತಟ್ಟಿದಂತಾಗಿದೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಘಟ್ಟದ ಮೇಲ್ಬಾಗದಲ್ಲಿಯೂ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಯಾಸ್ ಚಂಡಮಾರುತದ ಹಿನ್ನೆಲೆ ಈಗಾಗಲೇ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಬಹುತೇಕ ಬೋಟ್‌ಗಳು ಈಗಾಗಲೇ ಲಂಗರು ಹಾಕಿರುವುದರಿಂದ ಮೀನುಗಾರಿಕೆಗೆ ತೆರಳಿದ ಕೆಲ ಬೋಟ್‌ಗಳು ಕೂಡ ವಾಪಸ್ ಆಗಿವೆ. ಇನ್ನು, ಎರಡು ದಿನಗಳ ಕಾಲ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ABOUT THE AUTHOR

...view details