ಭಟ್ಕಳ:ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಪಿಐಎಮ್ ಮುಖ್ಯಸ್ಥೆ ಯಮುನಾ ಗಾಂವ್ಕರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ.
ನನಗೆ ಕ್ರೈಸ್ತರು, ಮುಸ್ಲಿಂಮರು ಅನ್ನ ಹಾಕಿದ್ದಾರೆ, ಸನಾತನಿಗಳು ನನಗೆ ಅನ್ನ ಹಾಕಿಲ್ಲ: ಯಮುನಾ ಗಾಂವ್ಕರ್ - Yamuna Ganvkar Outrage against Prime Minister
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಪಿಐಎಮ್ ಮುಖ್ಯಸ್ಥೆ ಯಮುನಾ ಗಾಂವ್ಕರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ.

ದೇಶದಲ್ಲಿ ಹಿಂದೆ ಧರ್ಮದ ಆಧಾರದ ಮೇಲೆ ಸ್ವಾತಂತ್ರ್ಯ ಹೋರಾಟಗಾರರಿರಲಿಲ್ಲ. ನನಗೆ ಕ್ರೈಸ್ತರು, ಮುಸ್ಲಿಂಮರು ಅನ್ನ ಹಾಕಿದ್ದಾರೆ. ಆದರೆ ಸನಾತನಿಗಳು ನನಗೆ ಅನ್ನ ಹಾಕಿಲ್ಲ. ಧರ್ಮವೂ ಸಂವಿಧಾನದ ಆಧಾರದಲ್ಲಿದೆ. ಭಾರತ ದೇಶ ಒಂದಲ್ಲ ದೇಶದೊಳಗೆ ಒಂದು ಬಹುತ್ವವಿದ್ದು ಅವೆಲ್ಲವನ್ನು ಸಂಘಟಿಸಿದ ಎಲ್ಲರು ಒಂದಾಗಿ ಬದುಕುತ್ತಿದ್ದೇವೆ. ದೇಶದ ಸ್ವಾತಂತ್ರ್ಯದ ಇತಿಹಾಸ ತಿಳಿಯದಿರುವಂತಹ ಸನಾತನ, ಆರ್ಎಸ್ಎಸ್ ಸಂತಾನಗಳಿಗೆ ದೇಶದ ಮೇಲಿನ ಪ್ರೀತಿ ತೋರಿಸಬೇಕಾಗಿಲ್ಲ. ಹಿಂದುತ್ವದ ಗುತ್ತಿಗೆ ತೆಗೆದುಕೊಂಡವರು ಪೌರತ್ವ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಕಿಡಿ ಕಾರಿದರು.
ಇನ್ನು ನಿಜವಾದ ಹಿಂದುಗಳು ಇದನ್ನು ಜಾರಿಗೆ ತಂದಿಲ್ಲ. ದೇಶವನ್ನು ಛಿದ್ರ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.