ಕರ್ನಾಟಕ

karnataka

ETV Bharat / state

ಜನತಾ ಜನಾರ್ಧನನ ಕೋರ್ಟ್  ಅರ್ಹನೋ - ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್ - yellapura by poll

ನಾನು ಅರ್ಹನೋ ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ್​ ತೀರ್ಮಾನ ಮಾಡುತ್ತದೆ ಎಂದು ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

yallapura by poll...shivaram hebbar family voted at arabail school
ಜನತಾ ಜನಾರ್ಧನನ ಕೋರ್ಟ್ ನಾನು ಅರ್ಹನೋ ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್

By

Published : Dec 5, 2019, 12:39 PM IST


ಉತ್ತರಕನ್ನಡ:ಯಲ್ಲಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಜನತಾ ಜನಾರ್ಧನನ ಕೋರ್ಟ್ ನಾನು ಅರ್ಹನೋ ಅನರ್ಹನೋ ತೀರ್ಮಾನ ಮಾಡುತ್ತೆ: ಶಿವರಾಮ ಹೆಬ್ಬಾರ್

ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 64ರಲ್ಲಿ ಪತ್ನಿ ವನಜಾಕ್ಷಿ, ಮಗ ವಿವೇಕ್, ಮಗಳು ಶೃತಿ ಹಾಗೂ ಸೊಸೆ ದಿವ್ಯಾ ಹೆಬ್ಬಾರ್ ಜೊತೆಯಲ್ಲಿ ಆಗಮಿಸಿ, ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅರ್ಹನೋ - ಅನರ್ಹನೋ ಎಂದು ಜನತಾ ಜನಾರ್ಧನನ ಕೋರ್ಟ್​ ತೀರ್ಮಾನ ಮಾಡುತ್ತದೆ ಎಂದರು.

ಇನ್ನು, ಕಳೆದ ಒಂದಷ್ಟು ದಿನಗಳಿಂದ ನಡೆಯುತ್ತಿರುವ ವಾದಗಳಿಗೆ ಡಿಸೆಂಬರ್​ 9ರಂದು ಉತ್ತರ ಸಿಗಲಿದೆ. ಅಂದು ಪ್ರಕರಣ ಮುಕ್ತಾಯವಾಗುತ್ತದೆ. ಯಾರೂ ಕೂಡ ಊಹೆ ಮಾಡದಷ್ಟು ದೊಡ್ಡ ಪ್ರಮಾಣದ ಅಂತರದಲ್ಲಿ ನಾನು ವಿಜಯ ಸಾಧಿಸುತ್ತೇನೆ ಎಂದರು.‌

ABOUT THE AUTHOR

...view details