ಕರ್ನಾಟಕ

karnataka

ETV Bharat / state

ಯಲ್ಲಾಪುರ: ಕಾರ್​ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು- ಭಯಾನಕ ದೃಶ್ಯ! - ಹೊಸೂರು ರಸ್ತೆೆಯ ಸರ್ವೀಸ್ ರೋಡ್

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ರಸ್ತೆಬದಿ ನಿಂತಿದ್ದ ಇನೋವಾ ಕಾರ್​ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

vಕಾರ್​ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು
ಕಾರ್​ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು

By ETV Bharat Karnataka Team

Published : Oct 15, 2023, 10:59 PM IST

ಕಾರ್​ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಶಿರಸಿ (ಉತ್ತರ ಕನ್ನಡ): ರಸ್ತೆಬದಿ ನಿಂತಿದ್ದ ಇನೋವಾ ಕಾರ್​ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆಯಿತು.

ಯಲ್ಲಾಪುರ ಪಟ್ಟಣದ ಶಾನುಭಾಗ ಹೋಟೆಲ್ ಎದುರು ಬೈಕ್‌ನಲ್ಲಿ ಟ್ರಿಪಲ್ ರೈಡಿಂಗ್ ಮಾಡಿಕೊಂಡು ಅತಿ ವೇಗದಲ್ಲಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಘಟನೆ ನಡೆದಿದೆ. ದರ್ಶನ್ ಭಂಡಾರಿ (16), ರಾಜು (17) ಸಾವನ್ನಪ್ಪಿದ ಯುವಕರು. ಬೈಕ್​ನಲ್ಲಿದ್ದ ಜಾಬೀರ್ (16) ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಒಂದು ವಾಹನ ಏಕಾಏಕಿಯಾಗಿ ತಿರುಗಿಸಿದ ಪರಿಣಾಮ, ದ್ವಿಚಕ್ರ ವಾಹನ ನಿಂತಿದ್ದ ಕಾರಿಗೆ ಬಡಿದಿರುವ ದೃಶ್ಯವಿದೆ.‌ ಯಲ್ಲಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಅಪಘಾತ ಪ್ರಕರಣ- ಮೂವರು ಸಾವು:ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ಮೂರು ರಸ್ತೆೆ ಅಪಘಾತ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮೂವರು ಮೃತಪಟ್ಟಿದ್ದಾರೆ. ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ರೈಲು ನಿಲ್ದಾಣದಿಂದ ಕರೆತರಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆೆ ಗುದ್ದಿ ಮಂಜುನಾಥ ಎಂಬವರು ಮೃತಪಟ್ಟಿದ್ದಾರೆ.

ಮಂಜುನಾಥ್ ಶನಿವಾರ ಮಹಾಲಯ ಅಮಾವಾಸ್ಯೆೆ ನಿಮಿತ್ತ ಪಿತೃಪಕ್ಷದ ಪೂಜೆಗಾಗಿ ಹೆಸರುಘಟ್ಟ ರಸ್ತೆೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ತುಮಕೂರಿನಿಂದ ಹೆಸರುಘಟ್ಟ ರೈಲ್ವೆೆ ನಿಲ್ದಾಣಕ್ಕೆೆ ಬಂದಿದ್ದ ಪತ್ನಿಯನ್ನು ಕರೆತರಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆೆ ಜಾಲಹಳ್ಳಿ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆೆ ಡಿಕ್ಕಿ‌ ಹೊಡೆದಿದೆ.

ವಿದ್ಯಾರ್ಥಿ ಸಾವು:ಮತ್ತೊಂದು ಪ್ರಕರಣದಲ್ಲಿ ಚಿಕ್ಕಪೇಟೆಯಲ್ಲಿ ಈಚರ್ ವಾಹನಕ್ಕೆೆ ಬೈಕ್ ಡಿಕ್ಕಿ ಹೊಡೆದು ಪಿಯುಸಿ ವಿದ್ಯಾರ್ಥಿ ಜಯಸೂರ್ಯ ದುರ್ಮರಣ ಹೊಂದಿದ್ದಾರೆ. ರಾಯನ್ ಸರ್ಕಲ್ ಸಮೀಪದ ನಿವಾಸಿ ಜಯಸೂರ್ಯ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶನಿವಾರ ರಾತ್ರಿ 9.30ರಲ್ಲಿ ಬೈಕ್ ತೆಗೆದುಕೊಂಡು ಹೊರಗೆ ಹೋಗಿದ್ದಾಗ ಸಿಸಿಬಿ ಕಚೇರಿ ಹಿಂಭಾಗದ ರಸ್ತೆ ಬದಿ ನಿಂತಿದ್ದ ಈಚರ್ ವಾಹನಕ್ಕೆೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆೆಗೆ ಕರೆದೊಯ್ದರೂ ಚಿಕಿತ್ಸೆೆ ಫಲಿಸದೇ ಮೃತಪಟ್ಟಿದ್ದಾನೆ. ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ-ಪೈಂಟರ್ ದುರ್ಮರಣ:ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಬಿಹಾರಿ ಮೂಲದ ಬೊಮ್ಮನಹಳ್ಳಿಯಲ್ಲಿ ನಿವಾಸಿ ರಾಜು ಮೃತಪಟ್ಟಿದ್ದಾರೆ. ರಾಜು ಪೇಂಟರ್ ಕೆಲಸ ಮಾಡುತ್ತಿದ್ದು, ಶನಿವಾರ ಸಂಜೆ ಸ್ನೇಹಿತನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆೆ ಹೊಸೂರು ರಸ್ತೆೆಯ ಸರ್ವೀಸ್ ರೋಡ್ ಬಳಿ ಅತಿ ವೇಗವಾಗಿ ಬಂದ ಕಾರು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ರಾಮನಗರದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆ

ABOUT THE AUTHOR

...view details