ಕಾರವಾರ:ವಿಶ್ವ ವಿಶೇಷ ಚೇತನರ ದಿನಾಚರಣೆ ಹಿನ್ನೆಲೆಯಲ್ಲಿ, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಅನುಭವಿಸುತ್ತಿರುವ ಕುಂದು ಕೊರತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಮಟಾ ತಾಲೂಕು ವಿಶೇಷ ಚೇತನರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವಿಶ್ವ ವಿಶೇಷ ಚೇತನರ ದಿನಾಚರಣೆ : ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ
ವಿಶ್ವ ವಿಶೇಷ ಚೇತನರ ದಿನಾಚರಣೆ ಹಿನ್ನೆಲೆಯಲ್ಲಿ ಅವರನ್ನ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕುಂದು ಕೊರತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಮಟಾ ತಾಲೂಕು ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವಿಶೇಷ ಚೇತನರಿಗೆ ಸರ್ಕಾರದ ಯೋಜನೆಗಳು, ಸವಲತ್ತುಗಳು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಸಿಗಬೇಕು. ಅವರ ಮೀಸಲು ಅನುದಾನದ ಸದ್ಭಳಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾಸಾಶನ ಮಂಜೂರು ಮಾಡುವಾಗ ವಿಶೇಷ ಚೇತನರ ವೈಯಕ್ತಿಕ ಆದಾಯ ಮಾತ್ರ ಪರಿಗಣಿಸುವ ಸರ್ಕಾರದ ಆದೇಶ ಎಲ್ಲೆಡೆ ಪಾಲನೆಯಾಗಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಸ್ ಪಡೆಯಲು ಶಿರಸಿ ವಿಭಾಗೀಯ ಸಾರಿಗೆ ಕಚೇರಿಗೆ ತೆರಳಬೇಕಾಗಿದ್ದು, ಅದನ್ನು ಸರಳಗೊಳಿಸಿ ಆಯಾ ತಾಲೂಕು ಮಟ್ಟದಲ್ಲೇ ಕೊಡಬೇಕು ಹಾಗೂ ಪ್ರಯಾಣದ ದೂರದ ಮಿತಿಯನ್ನು ತೆಗೆದು ರಾಜ್ಯಾದ್ಯಂತ ಓಡಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ವಿಶೇಷ ಚೇತನರ ಶೇಕಡಾವಾರು ಮಾನದಂಡ ಬಿಟ್ಟು ಎಲ್ಲರಿಗೂ 5000ರೂ. ಮಾಸಾಶನವನ್ನು ನೀಡಬೇಕು. ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯ ಬಳಕೆಗಾಗಿ ಕಂದಾಯ ನಿವೇಶನ ಒದಗಿಸಬೇಕು. ಜನಗಣತಿಯಲ್ಲಿ ಪ್ರತ್ಯೇಕ ಅವಕಾಶ ಕಲ್ಪಿಸಬೇಕು. ವೈದ್ಯಕೀಯ ಪ್ರಮಾಣಪತ್ರಗಳನ್ನು ತಾಲೂಕು ಆಸ್ಪತ್ರೆಗಳಲ್ಲೇ ಕೊಡಬೇಕು. ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ವಿಶೇಷ ಚೇತನರು ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ಮುಂತಾದ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿದೆ.