ಭಟ್ಕಳ:ತಾಲೂಕಿನ ಮುರ್ಡೇಶ್ವರದ ಮಹಿಳೆಯನ್ನು ವಸತಿಗೃಹಕ್ಕೆ ಕರೆದೊಯ್ದು ನಂತರ ಅವಳ ನಗ್ನ ದೇಹವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಆ ವಿಡಿಯೋವನ್ನು ವೈರಲ್ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮುರ್ಡೇಶ್ವರದಲ್ಲಿ ಮಾನಗೇಡಿ ಕೃತ್ಯ... ಮಹಿಳೆಯ ನಗ್ನ ವಿಡಿಯೋ ವೈರಲ್ ಮಾಡಿದ ಖಾಸಗಿ ಬಸ್ ಚಾಲಕ - ನಗ್ನ ವಿಡಿಯೋ ವೈರಲ್ ಮಾಡಿದ ಖಾಸಗಿ ಬಸ್ ಚಾಲಕ.
ಖಾಸಗಿ ಬಸ್ ಚಾಲಕನೋರ್ವ ಮಹಿಳೆಯ ವಿಡಿಯೋವನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿರುವ ಪ್ರಕರಣ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕನಾಗಿರುವ ವ್ಯಕ್ತಿ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡು ದುಷ್ಕೃತ್ಯವೆಸಗಿದ್ದಾನೆ. ಈ ಮಹಿಳೆಯು ಎರಡು ಮಕ್ಕಳ ತಾಯಿಯಾಗಿದ್ದು, ಚಾಲಕನ ಸಂಗದಿಂದಾಗಿ ಆಕೆಯ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಬಗ್ಗೆ ಆಕೆಯ ಪತಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಸಹ ಏರಿದ್ದು ರಾಜಿ ಸಂಧಾನದ ಪ್ರಯತ್ನ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಸೂಕ್ಷ್ಮತೆಯನ್ನು ಅರಿತಿರುವ ಮುರ್ಡೇಶ್ವರ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಮಹಿಳೆಯ ಮಾನಭಂಗ ಅಪರಾಧವಾಗಿದ್ದು, ತಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.