ಕರ್ನಾಟಕ

karnataka

ETV Bharat / state

ಒಂಟಿ ಮಹಿಳೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - ಭಟ್ಕಳ ಲೇಟೆಸ್ಟ್​ ಕ್ರೈಂ ನ್ಯೂಸ್​

ಒಂಟಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಪ್ರಕರಣವನ್ನು ಭಟ್ಕಳ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಕೊಪ್ಪ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳು.

bhatkal
ಬಂಧಿತರು

By

Published : Mar 11, 2021, 6:50 AM IST

ಭಟ್ಕಳ: ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯೊಂದಕ್ಕೆ ನುಗ್ಗಿ ಒಂಟಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ ಪ್ರಕರಣವನ್ನು ಭಟ್ಕಳ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉತ್ತರ ಕೊಪ್ಪ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳು. ಕೊಲೆಯಾದ ಲಕ್ಷ್ಮಿ ಕೃಷ್ಣ ನಾಯ್ಕ(45) ಮನೆಯ ಎದುರು ಇರುವ ದಾರಿ ಪಕ್ಕದಲ್ಲಿ ಬೆಳೆದ ಗೋವೆ ಮರದ ಕೊಂಬೆ ತುಂಡಾಗಿ ಬಿದ್ದ ವಿಚಾರದಲ್ಲಿ ಮಾಸ್ತಮ್ಮ ನಾಯ್ಕ, ಮಾದೇವ ನಾಯ್ಕ ಎನ್ನುವವರು ಗಲಾಟೆ ಮಾಡಿದ್ದರು. ನಂತರ ಜ. 23ರ ರಾತ್ರಿ ಮನೆಯೊಳಗೆ ನುಗ್ಗಿ ಬೆಂಕಿ ಹಾಕಿ ಅವರನ್ನು ಬೆಂಕಿಗೆ ದೂಡಲು ಪ್ರಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಲಕ್ಷ್ಮಿ ಕೃಷ್ಣ ನಾಯ್ಕ ಅವರ ತಲೆಗೆ ಆಯಧದಿಂದ ಬಡಿದು ಹಲ್ಲೆ ನಡೆಸಿದ್ದಾರೆ. ಬಳಿಕ ಮೃತರು ಧರಿಸಿದ ಸೀರೆಯನ್ನು ಕೊರಳಿಗೆ ಹಾಕಿ ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಲು ಪ್ರಯತ್ನಸಿದ್ದರು ಎನ್ನಲಾಗಿದೆ.

ಆರೋಪಿಗಳು ಪಕ್ಕದ ಮನೆಯವರೇ ಆಗಿದ್ದು, ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಸ್ಥಳದಲ್ಲಿ ಹಸಿರು ಬಳೆಯನ್ನು ಪತ್ತೆ ಹಚ್ಚಿದ್ದರು. ಮೃತ ಮಹಿಳೆ ವಿಧವೆ ಆಗಿದ್ದರಿಂದ ಹಸಿರು ಬಳೆ ತೊಡುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ತನಿಖೆ ಚುರುಕು ಗೊಳಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.

ಓದಿ:ಭಟ್ಕಳ: ಕತ್ತು ಹಿಸುಕಿ ಮಹಿಳೆ ಕೊಲೆ

ABOUT THE AUTHOR

...view details