ಕರ್ನಾಟಕ

karnataka

ETV Bharat / state

ಮನೆ ಗಡಿ ವಿವಾದ: ನಡುರಸ್ತೆಯಲ್ಲಿಯೇ ಬಡಿದಾಡಿಕೊಂಡ ಮಹಿಳೆಯರು - ಕಾರವಾರದ ಕುಮಟಾ ನಗರದಲ್ಲಿ ಮಹಿಳೆಯರು ಹೊಡೆದಾಟ

ಕುಮಟಾ ನಗರದ ಹೊಸ ಮೀನು ಮಾರುಕಟ್ಟೆಯಲ್ಲಿ ಮನೆ ಗಡಿವಿವಾದ ವಿಕೋಪಕ್ಕೆ ತಿರುಗಿ ಮಹಿಳೆಯರು ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದಾರೆ.

ನಡುರಸ್ತೆಯಲ್ಲಿಯೇ ಬಡಿದಾಡಿಕೊಂಡ ಮಹಿಳೆಯರು
ನಡುರಸ್ತೆಯಲ್ಲಿಯೇ ಬಡಿದಾಡಿಕೊಂಡ ಮಹಿಳೆಯರು

By

Published : Jul 26, 2022, 10:49 PM IST

ಕಾರವಾರ: ಮನೆ ಗಡಿ ವಿವಾದ ವಿಕೋಪಕ್ಕೆ ತಿರುಗಿ ಮಹಿಳೆಯರು ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡ ಘಟನೆ ಕುಮಟಾ ನಗರದ ಹೊಸ ಮೀನು ಮಾರುಕಟ್ಟೆಯಲ್ಲಿ ನಡೆದಿದೆ.

ನಡುರಸ್ತೆಯಲ್ಲಿಯೇ ಬಡಿದಾಡಿಕೊಂಡ ಮಹಿಳೆಯರು

ಮಾಯಾ ಗಜಾನನ ಭಂಡಾರಿ, ಸೌಮ್ಯ ಭಂಡಾರಿ ಗಾಯಗೊಂಡ ಮಹಿಳೆಯರು. ಮಂಗಳ ಲೋಪಿಸ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಈ ಹಿಂದೆ ಎರಡು ಮನೆಯವರ ನಡುವೆ ಜಾಗ ಒತ್ತುವರಿಯಾಗಿದೆ ಎಂಬ ಕಾರಣಕ್ಕೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಇಂದು ಮಾಯಾ ಬಂಡಾರಿ ಮನೆ ಎದುರು ಮಂಗಳ ಲೋಪಿಸ್ ಅಂಗಡಿ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ಜಗಳವಾಗಿದೆ.

ಅಲ್ಲದೇ, ನಡು ರಸ್ತೆಯಲ್ಲಿಯೇ ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಇನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ತಾಯಿ ಮತ್ತು ಮಗಳು ಚಿಕಿತ್ಸೆ ಪಡೆಯುತ್ತಿದ್ದು, ಮಂಗಳಾ ಲೋಪಿಸ್ ತಮ್ಮನ್ನು ರಸ್ತೆ ಮೇಲೆ ಬೀಳಿಸಿ ಹಲ್ಲೆ ಮಾಡಿದ್ದಾರೆ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಮಂಗಳೂರು ಪಬ್ ದಾಳಿ ಪ್ರಕರಣ: ವಿದ್ಯಾರ್ಥಿಗಳ ಪೈಕಿ 8 ಮಂದಿ ಅಪ್ರಾಪ್ತರು ಎಂದ ಕಮಿಷನರ್​

ABOUT THE AUTHOR

...view details