ಭಟ್ಕಳ:ತಾಲೂಕಿನ ಮುರುಡೇಶ್ವರದ ಉತ್ತರ ಕೊಪ್ಪದ ಕೊಂಕಣಾತಿಬೈಲಿನಲ್ಲಿ ಮಹಿಳೆಯೋರ್ವರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಭಟ್ಕಳ: ಕತ್ತು ಹಿಸುಕಿ ಮಹಿಳೆ ಕೊಲೆ - ಕತ್ತು ಹಿಸುಕಿ ಮಹಿಳೆ ಕೊಲೆ
ಮುರುಡೇಶ್ವರದ ಉತ್ತರ ಕೊಪ್ಪದ ಕೊಂಕಣಾತಿಬೈಲಿನಲ್ಲಿ ಮಹಿಳೆಯೋರ್ವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಲಕ್ಷ್ಮಿ ಕೃಷ್ಣ ನಾಯ್ಕ ಕೊಲೆಯಾದ ಮಹಿಳೆ.
ಲಕ್ಷ್ಮಿ ಕೃಷ್ಣ ನಾಯ್ಕ ಕೊಲೆಯಾದ ಮಹಿಳೆ.
ಉತ್ತರ ಕೊಪ್ಪದ ನಿವಾಸಿ ಲಕ್ಷ್ಮಿ ಕೃಷ್ಣ ನಾಯ್ಕ ಕೊಲೆಯಾದ ಮಹಿಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಮಹಿಳೆಯ ತಲೆಯ ಭಾಗಕ್ಕೆ ದೊಡ್ಡ ಗಾಯವಾಗಿದೆ. ಮೃತ ಮಹಿಳೆಯ ಗಂಡ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದು, ಮೂರು ಮಕ್ಕಳನ್ನು ಹೊಂದಿದ್ದಾರೆ.
ಸ್ಥಳಕ್ಕೆ ಮುರುಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.