ಕರ್ನಾಟಕ

karnataka

ETV Bharat / state

ಎರಡು ಹೆಣ್ಣು, ಒಂದು ಗಂಡು: 7 ತಿಂಗಳಿಗೇ ನಾರ್ಮಲ್​ ಡೆಲಿವರಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಕುಮಟಾದ ತಾಯಿ - karwar latest news

ಕಾರವಾರದ ಡಾ. ಜಾನು ಮಣಕಿಕರ್ಸ್ ಮೆಟರ್​​​ನಿಟಿ ಮತ್ತು ನರ್ಸಿಂಗ್ ಹೋಮ್​ ಮಹಿಳೆಯೊಬ್ಬರು ಏಳು ತಿಂಗಳಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

woman gives birth to three children
7ತಿಂಗಳಿಗೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

By

Published : Oct 3, 2021, 5:53 PM IST

Updated : Oct 3, 2021, 7:00 PM IST

ಕಾರವಾರ:ಮಹಿಳೆಯೋರ್ವಳು ಅವಧಿ ಪೂರ್ವವೇ ತ್ರಿವಳಿ ಮಕ್ಕಳಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿರುವ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.

ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಬಗ್ಗೆ ವೈದ್ಯರಿಂದ ಮಾಹಿತಿ

ಗೋಕರ್ಣದ ಗಂಗಾವಳಿ ನಿವಾಸಿ ಹಲೀಮಾ ಸಾಧಿಕ್ ಸಾಬ್ ಎಂಬುವರಿಗೆ 7ನೇ ತಿಂಗಳಿನಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ, ಪಟ್ಟಣದ ಡಾ. ಜಾನು ಮಣಕಿಕರ್ಸ್ ಮೆಟರ್​​​ನಿಟಿ ಮತ್ತು ನರ್ಸಿಂಗ್ ಹೋಮ್‍ನಲ್ಲಿ ದಾಖಲಿಸಲಾಗಿತ್ತು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯ ಡಾ. ಪ್ರಶಾಂತ ಮಣಕಿಕರ್ ಹೆರಿಗೆ ಮಾಡಿಸುವ ಬಗ್ಗೆ ತಿಳಿಸಿದ್ದರು.‌ ಅದರಂತೆ ಇಂದು ಸುರಕ್ಷಿತ ಮತ್ತು ಯಶಸ್ವಿಯಾಗಿ ನಾರ್ಮಲ್​​ ಹೆರಿಗೆ ಮಾಡಿಸಲಾಗಿದ್ದು, ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮೂರೂ ಶಿಶುಗಳು ಆರೋಗ್ಯವಾಗಿವೆ. ಆದರೂ ಕೂಡ ಶಿಶುಗಳ ಸಂಪೂರ್ಣ ಬೆಳವಣಿಗೆಯಾಗದ ಕಾರಣ ಅವುಗಳ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ.

7 ತಿಂಗಳಿಗೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪ್ರಶಾಂತ ಮಣಕಿಕರ್ ತಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲು ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಘಟನೆ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯಾಗಿಲ್ಲ, ಎಲ್ಲಾ ಸುಸೂತ್ರವಾಗಿ ನಾರ್ಮಲ್​ ಹೆರಿಗೆ ಆಗಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

Last Updated : Oct 3, 2021, 7:00 PM IST

ABOUT THE AUTHOR

...view details