ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಮಧ್ಯಮ ವರ್ಗದ ಮಹಿಳೆ ತಮ್ಮ ಪತಿಯೊಂದಿಗೆ ಸೇರಿಕೊಂಡು ಬಡವರ ತುತ್ತಿನ ಚೀಲ ತುಂಬಿಸುತ್ತಿದ್ದಾರೆ.
ಕೊರೊನಾ ಕರ್ಪ್ಯೂ ಪೆಟ್ಟು ಕೊಟ್ಟರೂ ಮರುಗದ ಗಟ್ಟಿಗಿತ್ತಿ: ಬಡವರಿಗೆ ಕಿಟ್ ಹಂಚಿ ಮಾನವೀಯತೆ - ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ
ಕೊರೊನಾ ಕರ್ಪ್ಯೂ ಪೆಟ್ಟು ಕೊಟ್ಟರು ಮರುಗದ ಗಟ್ಟಿಗಿತ್ತಿಯೊಬ್ಬರು ಮುಂಡಗೋಡು ಪಟ್ಟಣದದಲ್ಲಿ ಬಡವರಿಗೆ ಕಿಟ್ ಹಂಚಿ ಮಾನವೀಯತೆ ಮೆರೆದಿದ್ದಾರೆ.
ಬಡವರಿಗೆ ಕಿಟ್ ಹಂಚಿ ಮಹಿಳೆ ಮಾನವೀಯತೆ
ಗಾಯತ್ರಿ ನವೀನ್ ಕಾನಡೆ ಎಂಬವರು ಶ್ರೀ ಲಕ್ಷ್ಮೀ ಹೋಂ ಪ್ರಾಡಕ್ಟ್ ಹೆಸರಿನಲ್ಲಿ ವಿವಿಧ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ, ಜನತಾ ಕರ್ಪ್ಯೂ ಜಾರಿಯಾಗುವ ಮೊದಲು ಪ್ರಾಡಕ್ಟ್ ಗಾಗಿ ಹಲವು ಸಾಮಗ್ರಿಗಳನ್ನ ಖರೀದಿಸಿದ್ದರಂತೆ.
ಆದರೆ, ಎಲ್ಲೆಡೆ ಬಂದ್ ವಾತಾವರಣ ಇದ್ದಿದರಿಂದ ಏನು ಮಾಡುವುದೆಂದು ತೋಚಿರಲಿಲ್ಲ. ಹೀಗಾಗಿ ಬಡವರಿಗಾದರೂ ಸಹಾಯ ಮಾಡಬಹುದಲ್ಲ ಅಂದುಕೊಂಡು ಪತಿ ಜೊತೆ ಚರ್ಚಿಸಿ ಮತ್ತಷ್ಟು ಸಾಮಗ್ರಿ ಖರೀದಿಸಿ ಪುಡ್ ಕಿಟ್ ಮಾಡಿ ವಿತರಿಸುವ ಮೂಲಕ ತೃಪ್ತಿ ಕಾಣುತ್ತಿದ್ದಾರೆ.