ಕರ್ನಾಟಕ

karnataka

ETV Bharat / state

ಮನೆ ಬಿದ್ದು ವಿಶೇಷ ಚೇತನ ಮಹಿಳೆ ದಾರುಣ ಸಾವು: 7 ಲಕ್ಷ ಪರಿಹಾರ ಘೋಷಿಸಿದ ಸಚಿವ ಹೆಬ್ಬಾರ್ - ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಳೆಯದಾಗಿದ್ದ ಗೋಡೆ ಕುಸಿದು ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟರು.

ಮನೆ ಬಿದ್ದು ಮಹಿಳೆ ಸಾವು
ಮನೆ ಬಿದ್ದು ಮಹಿಳೆ ಸಾವು

By

Published : Jul 13, 2021, 8:49 PM IST

ಶಿರಸಿ: ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ವಿಶೇಷ ಚೇತನ ಮಹಿಳೆಯೊರ್ವಳು ಮೃತಪಟ್ಟ ಘಟನೆ ತಾಲೂಕಿನ‌ ಗುಡ್ನಾಪುರದ ಮುಂಡಗೆಹಳ್ಳಿಯಲ್ಲಿ ನಡೆದಿದೆ. ಗುಡ್ನಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಂಡಗೆಹಳ್ಳಿಯ ಯಶೋಧಾ ಬಂಗಾರ್ಯ ಗೌಡ (45) ಮೃತಪಟ್ಟ ವಿಶೇಷ ಚೇತನ ಮಹಿಳೆ.

ಮನೆ ಬಿದ್ದು ಮಹಿಳೆ ಸಾವು

ಘಟನೆ ನಡೆದ ವಿಚಾರ ತಿಳಿದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ, 48 ಗಂಟೆಗಳಲ್ಲಿ ಸರ್ಕಾರದಿಂದ 7 ಲಕ್ಷ ಪರಿಹಾರ ಒದಗಿಸುವ ಭರವಸೆ ನೀಡಿದರು.

ಕುಟುಂಬದ ಹಿರಿಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವರು, ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಅಮಾಯಕ ಹೆಣ್ಣು ಮಗಳು ಬಲಿಯಾಗಿದ್ದಾಳೆ. ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಗೋಡೆ ಬಿದ್ದಿದ್ದು, ಅವರಿಗೆ ನೂತನ ಮನೆ ಕಟ್ಟಿಸಿಕೊಡುತ್ತೇನೆ ಎಂದರು.

ಇದನ್ನೂ ಓದಿ: 'ಭೂಪತಿ' vs ಉಮಾಪತಿ ಮನಸ್ತಾಪಕ್ಕೆ ಪೂರ್ಣವಿರಾಮ: 'ಲೇಡಿ' ವಿರುದ್ಧ ಸಮರಕ್ಕೆ 'ದುರ್ಯೋಧನ'ನ ತಯಾರಿ

ABOUT THE AUTHOR

...view details