ಭಟ್ಕಳ(ಉತ್ತರಕನ್ನಡ): ಮಗುವಿಗೆ ಜನ್ಮ ನೀಡಿದ ಮೂರೇ ದಿನಕ್ಕೆ ಬಾಣಂತಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಾಸ್ಪತ್ರೆಯಲ್ಲಿ ಜರುಗಿದೆ.
ಜನ್ಮ ನೀಡಿದ ಮೂರೇ ದಿನಕ್ಕೆ ಕೊನೆಯುಸಿರೆಳೆದ ತಾಯಿ: ವೈದ್ಯರ ವಿರುದ್ಧ ಆಕ್ರೋಶ - uttara kannada crime news
ಈಕೆಯ ತವರು ಮನೆಯಾದ ಭಟ್ಕಳ ತಾಲೂಕಿನ ಮುಂಡಳ್ಳಿಯಿಂದ ಮೂರು ದಿನದ ಹಿಂದಷ್ಟೇ ತಾಲೂಕಾಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ಮಾಡಿ ಮಗುವನ್ನು ಹೊರತೆಗೆಯಲಾಗಿತ್ತು.
ಮಾಲತಿ ಸುಧಾಕರ ಆಚಾರಿ ಮೃತ ಬಾಣಂತಿ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಕೆ ತನ್ನ ತವರು ಮನೆಯಾದ ಭಟ್ಕಳ ತಾಲೂಕಿನ ಮುಂಡಳ್ಳಿಯಿಂದ ಮೂರು ದಿನದ ಹಿಂದಷ್ಟೇ ತಾಲೂಕಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸರ್ಜರಿ ಮೂಲಕ ಮಗುವನ್ನು ಹೊರತೆಗೆದಿದ್ದರು. ನಿನ್ನೆ ರಾತ್ರಿಯಿಂದ ವಿಪರೀತ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡಿದರಾದರೂ ಇಂದು ಬೆಳಗ್ಗೆ ಮೃತ ಪಟ್ಟಿದ್ದಾಳೆ.
ಈ ವಿಷಯ ತಿಳಿಯುತ್ತಿದಂತೆ ಮೃತ ಬಾಣಂತಿಯ ಸಂಬಂಧಿಕರೆಲ್ಲ ತಾಲೂಕಾಸ್ಪತ್ರೆಗೆ ಜಮಾಯಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.