ಭಟ್ಕಳ:ತಾಲೂಕಿನ ಬೈಲೂರು ಗ್ರಾಮದ ಮಡಿಕೇರಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ವಿಷಪೂರಿತ ಹಾವು ಕಚ್ಚಿ ಮಹಿಳೆ ಸಾವು - ಭಟ್ಕಳದ ಬೈಲೂರು ಗ್ರಾಮದಲ್ಲಿ ಹಾವು ಕಚ್ಚಿ ಮಹಿಳೆ ಸಾವು
ಹಾವು ಕಚ್ಚಿ ಮಹಿಳೆ ಮೃತಪಟ್ಟಿರುವ ಘಟನೆ ಭಟ್ಕಳದ ಬೈಲೂರು ಗ್ರಾಮದಲ್ಲಿ ನಡೆದಿದೆ.

ಹೋಂ ಐಸೋಲೇಶನ್ಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಪಾರ್ವತಿ ಮಂಜುನಾಥ ನಾಯ್ಕ (55 ) ಮೃತ ಮಹಿಳೆ. ಗದ್ದೆಯಲ್ಲಿ ಕಳೆ ತೆಗೆಯುತ್ತಿದ್ದಾಗ ವಿಷಪೂರಿತ ಹಾವೊಂದು ಪಾರ್ವತಿಯವರ ಬಲಗೈ ಹೆಬ್ಬೆರಳಿಗೆ ಕಚ್ಚಿದೆ. ತಕ್ಷಣ ಅವರನ್ನು ಹೊನ್ನಾವರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.