ಕರ್ನಾಟಕ

karnataka

ETV Bharat / state

ಕಾರವಾರ: ಮಹಿಳೆ ಮೃತದೇಹ ಪತ್ತೆ, ಪ್ರಿಯಕರನಿಂದ ಕೊಲೆ ಶಂಕೆ - lady murder in karawara

ಕಳಸವಾಡದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಪ್ರಿಯಕರನ ಮೇಲೆ ಕೊಲೆ ಶಂಕೆ ವ್ಯಕ್ತವಾಗಿದೆ.

woman dead body found in karawara
ಕಾರವಾರದಲ್ಲಿ ಮಹಿಳೆ ಮೃತದೇಹ ಪತ್ತೆ

By

Published : Apr 7, 2022, 6:14 PM IST

ಕಾರವಾರ (ಉತ್ತರ ಕನ್ನಡ):ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕಳಸವಾಡದಲ್ಲಿ ನಡೆದಿದೆ. ತಾಲೂಕಿನ ಶಿರವಾಡದ ಶಾಂತಾ ಬಾಬು ಗೌಡ (45) ಮೃತ ಮಹಿಳೆ. ಪ್ರಿಯಕರ ಹನುಮಂತ ಸಿದ್ದಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:ಅಲ್ಪಸಂಖ್ಯಾತರ ಓಲೈಕೆಗಾಗಿ ಎಷ್ಟು ದಿನ ಸುಳ್ಳು ಸುದ್ದಿ ಹಬ್ಬಿಸುತ್ತೀರಿ?: ರೇಣುಕಾಚಾರ್ಯ

ಕಳಸವಾಡದ ಹನುಮಂತ ಸಿದ್ದಿ ಮನೆಯಲ್ಲಿ ವಾಸವಿದ್ದ ಮಹಿಳೆಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮಹಿಳೆಯ ಉಡುಗೆ ಅಸ್ತವ್ಯಸ್ತವಾಗಿತ್ತು. ಹನುಮಂತ ಸಿದ್ದಿ ಹಾಗೂ ಶಾಂತಾ ಬಾಬು ಗೌಡ ಇಬ್ಬರ ನಡುವೆ ರಾತ್ರಿ ವೇಳೆ ಗಲಾಟೆ ನಡೆದು ಕುಡಿದ ಅಮಲಿನಲ್ಲಿ ಹನುಮಂತ ಸಿದ್ದಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ವೆಲ್ಲೆಂಟೈನ್ ಡಿಸೋಜಾ, ಪಿಐ ಸಿದ್ದಪ್ಪ ಬಿಳಗಿ, ಪಿಎಸ್​ಐ ಸಂತೋಷ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details