ಶಿರಸಿ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿಗಾಹಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಭೀಕರ ಅಪಘಾತ ಕಲಘಟಗಿ-ಹಳಿಯಾಳ ರಸ್ತೆಯಲ್ಲಿರುವ ಜನಗಾ ಕ್ರಾಸ್ನಲ್ಲಿ ಸಂಭವಿಸಿದೆ.
ಹಳಿಯಾಳ ಬಳಿ ಭೀಕರ ಅಪಘಾತ: ಲಾರಿ ಹರಿದು 20ಕ್ಕೂ ಹೆಚ್ಚು ಕುರಿ, ಮಹಿಳೆ ಸಾವು - latest sirsi death
ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿಗಾಹಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಭೀಕರ ರಸ್ತೆ ಅಪಘಾತ ಕಲಘಟಗಿ- ಹಳಿಯಾಳ ರಸ್ತೆಯಲ್ಲಿರುವ ಜನಗಾ ಕ್ರಾಸ್ನಲ್ಲಿ ನಡೆದಿದೆ.
ಲಾರಿ ಹರಿದು 20ಕ್ಕೂ ಹೆಚ್ಚು ಕುರಿ ಜೊತೆಗೆ ಮಹಿಳೆ ಸಾವು
ಗೋಕಾಕ್ ತಾಲೂಕು ಹಿರೇಹಟ್ಟಿ ಗ್ರಾಮದ ನಿವಾಸಿ ಶೋಭಾ ಯಲ್ಲಪ್ಪಾ ಕರಿಗಾರ ಮೃತ ಮಹಿಳೆ. ರಸ್ತೆ ಬದಿಯಲ್ಲಿ ಕುರಿ ನಡೆಸಿಕೊಂಡು ಹೋಗುತ್ತಿದ್ದಾಗ ಕಲಘಟಗಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಲಾರಿಯೊಂದು ರಸ್ತೆ ತಿರುವಿನಲ್ಲಿ ಕುರಿ ಮತ್ತು ಕುರಿಗಾಹಿ ಮಹಿಳೆ ಮೇಲೆ ಹರಿದು ಈ ದುರ್ಘಟನೆ ನಡೆದಿದೆ.
ಸಿ.ಪಿ.ಐ ಬಿ.ಎಸ್. ಲೋಕಾಪುರ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Nov 21, 2019, 4:07 PM IST