ಕರ್ನಾಟಕ

karnataka

ETV Bharat / state

ಭಟ್ಕಳ: ಹಂದಿ ಬಲೆಗೆ ಸಿಲುಕಿದ್ದ ಕಾಡು ಮೊಲ ರಕ್ಷಣೆ - ಬೇಲಿಯ ಬಲೆಗೆ ಸಿಲುಕಿದ ಕಾಡು‌ಮೊಲ

ಹಂದಿ ನಿಯಂತ್ರಣಕ್ಕೆ ಹಾಕಿದ ಬೇಲಿಯ ಬಲೆಗೆ ಸಿಲುಕಿದ ಕಾಡು ‌ಮೊಲವೊಂದನ್ನು ಪ್ರಾಣಿ ಪ್ರೇಮಿ ಶೈಲೇಶ್ ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

wild rabbit Rescue
ಭಟ್ಕಳ: ಬೇಲಿಯ ಬಲೆಗೆ ಸಿಲುಕಿದ ಕಾಡು‌ಮೊಲದ ರಕ್ಷಣೆ

By

Published : Oct 25, 2020, 9:49 AM IST

ಭಟ್ಕಳ: ಆಹಾರಕ್ಕಾಗಿ ಅಲೆದಾಡುವ ವೇಳೆ ಕಾಡು ಮೊಲವೊಂದು ಹಂದಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿ ಗಾಯಗೊಂಡು ಬಳಲುತ್ತಿತ್ತು. ಇದನ್ನು ಕಂಡ ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ್ ವೈದ್ಯ ಅವರು ಮೊಲಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

ಹಂದಿ ಬಲೆಗೆ ಸಿಲುಕಿದ ಕಾಡು‌ ಮೊಲ ರಕ್ಷಣೆ

ಎಂದಿನಂತೆ ಬೆಳಗ್ಗೆ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಗದ್ದೆಯಲ್ಲಿ ಹಂದಿ ಕಾಟ ತಪ್ಪಿಸಲು ರೈತರು ಹಾಕಿದ‌ ಬೇಲಿಯ ಬಲೆಗೆ ಕಾಡು ಮೊಲವೊಂದು ಸಿಲುಕಿ ಒದ್ದಾಡುತ್ತಿತ್ತು. ಈ ವೇಳೆ ಕಾಲು, ತೊಡೆಯ ಭಾಗಕ್ಕೆ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶೈಲೇಶ ಅವರು ಮನೆಗೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಭಟ್ಕಳದ ಪಶು ಇಲಾಖೆಗೆ ಮೊಲವನ್ನು ತಂದು‌ ಔಷದೋಪಚಾರ ಮಾಡಿಸಿ, ಆಹಾರ ನೀಡಿ ಅರಣ್ಯ ಇಲಾಖಾ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.

ಕಾಡು‌ಮೊಲವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಶೈಲೇಶ್

ತೀರ ಗಾಯಗೊಂಡಿರುವ ಮೊಲ ಚೇತರಿಸಿಕೊಳ್ಳಲು ಇನ್ನೂ 3-4 ದಿನಗಳ ಚಿಕಿತ್ಸೆಯ ಅವಶ್ಯಕತೆ ಇದೆ. ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಯು ವಹಿಸಿಕೊಂಡಿದ್ದು, ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ ಅವರ ಕಾಳಜಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಧನ್ಯವಾದ ಸಲ್ಲಿಸಿದರು.

ABOUT THE AUTHOR

...view details