ಶಿರಸಿ :ರಾಜ್ಯದ ಕರಾವಳಿ ಭಾಗದ ಜ್ವಲಂತ ಸಮಸ್ಯೆಯಾದ ಮೀನುಗಾರರ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಮೀನುಗಾರರ ಸಮಸ್ಯೆ ಕುರಿತು ವಿಧಾನಸೌಧದಲ್ಲಿ ಧ್ವನಿ ಎತ್ತಲಾಗುವುದು : ಡಿಕೆಶಿ - ಮೀನುಗಾರರ ಸಮಸ್ಯೆ ಪರಿಹರಿಸುವುದಾಗಿ ಡಿಕೆಶಿ ಭರವಸೆ
ಹೊನ್ನಾವರದ ಕಾಸರಕೋಡ್ನಲ್ಲಿ ಬಂದರು ವಿಸ್ತರಣೆ ಯೋಜನೆ ನಡೆದಿದೆ. ಸರ್ಕಾರ ಏನೇ ಯೋಜನೆ ಜಾರಿ ಮಾಡಿದರೂ ಜನಪರವಾಗಿ ಕಾಂಗ್ರೆಸ್ ಹೋರಾಡುತ್ತದೆ. ಬಂದರು ಬೇರೆಲ್ಲಾದರೂ ಮಾಡಲಿ. ಆದರೆ, ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ..
![ಮೀನುಗಾರರ ಸಮಸ್ಯೆ ಕುರಿತು ವಿಧಾನಸೌಧದಲ್ಲಿ ಧ್ವನಿ ಎತ್ತಲಾಗುವುದು : ಡಿಕೆಶಿ assembly](https://etvbharatimages.akamaized.net/etvbharat/prod-images/768-512-12383929-thumbnail-3x2-dks.jpg)
ಬುಧವಾರ ಶಿರಸಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ. ಈ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಸಂಚರಿಸಿ ಮೀನುಗಾರರ ಸಮಸ್ಯೆ ಆಲಿಸಲಾಗಿದೆ. ಸಮಸ್ಯೆಗಳ ಪಟ್ಟಿಯನ್ನು ಸಿದ್ಧ ಮಾಡಲಾಗಿದ್ದು, ವಿಧಾನಸೌಧದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ತಿಳಿಸಿದ್ರು.
ಹೊನ್ನಾವರದ ಕಾಸರಕೋಡ್ನಲ್ಲಿ ಬಂದರು ವಿಸ್ತರಣೆ ಯೋಜನೆ ನಡೆದಿದೆ. ಸರ್ಕಾರ ಏನೇ ಯೋಜನೆ ಜಾರಿ ಮಾಡಿದರೂ ಜನಪರವಾಗಿ ಕಾಂಗ್ರೆಸ್ ಹೋರಾಡುತ್ತದೆ. ಬಂದರು ಬೇರೆಲ್ಲಾದರೂ ಮಾಡಲಿ. ಆದರೆ, ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದು ಹೇಳಿದ್ರು. ಇದೇ ವೇಳೆ ಕಾಂಗ್ರೆಸ್ನಲ್ಲಿ ಯಾವುದೇ ಬಣವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ರು.